Advertisement

ಏಶ್ಯ ಸ್ನೂಕರ್‌: ಭಾರತಕ್ಕೆ ಬೆಳ್ಳಿ

06:00 AM Sep 23, 2018 | Team Udayavani |

ದೋಹಾ: ಏಶ್ಯ ಸ್ನೂಕರ್‌ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ. ಕತಾರ್‌ ರಾಜಧಾನಿ ದೋಹಾದಲ್ಲಿ ನಡೆದ ಕೂಟದ ಫೈನಲ್ನಲ್ಲಿ ಭಾರತ ತಂಡ 2-3 ಅಂತರದಿಂದ ಪಾಕಿ ಸ್ಥಾನಕ್ಕೆ ಶರಣಾಗಿ ಚಿನ್ನವನ್ನು ಕಳೆದುಕೊಂಡಿತು.

Advertisement

ಮೊದಲ ಫ್ರೆàಮ್‌ನಲ್ಲಿ ಭಾರತದ ಪಂಕಜ್‌ ಆಡ್ವಾನಿ ಪಾಕ್‌ನ ಬಾಬರ್‌ ಮಾಸಿಹ್‌ ವಿರುದ್ಧ ಸೋತರೆ,ಮಲ್‌ಖೀತ್‌ ಸಿಂಗ್‌ಗೆ ಮೊಹಮ್ಮದ್‌ ಆಸಿಫ್ ವಿರುದ್ಧ ಗೆಲುವು ಒಲಿಯಿತು. ಡಬಲ್ಸ್‌ ವಿಭಾಗದಲ್ಲಿ ಪಾಕಿಸ್ಥಾನ 72-70 ಅಂತರದ ಜಯ ಸಾಧಿಸಿತು. ಎರಡನೇ ಫ್ರೆàಮ್‌ನಲ್ಲಿ ಪಂಕಜ್‌ ಆಡ್ವಾನಿ, ಮೊಹಮ್ಮದ್‌ ಆಸಿಫ್ ವಿರುದ್ಧ ಗೆಲುವು ಸಾಧಿಸಿದರು. ಬಾಬರ್‌ ಮಾಸಿಹ್‌ ವಿರುದ್ಧ ಮಲ್‌ಖೀತ್‌ ಸಿಂಗ್‌ ಸೋತರು. ಈ ಮೂಲಕ ಪಾಕಿಸ್ಥಾನ 3-2 ಅಂತರದ ಗೆಲುವು ದಾಖಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next