ನವದೆಹಲಿ: ಇಸ್ರೇಲ್ ದಾಳಿಯಿಂದ ಕಂಗೆಟ್ಟಿದ್ದ ಗಾಜಾಕ್ಕೆ ದೇಶಾದ್ಯಂತ ನೆರವಿನ ಹಸ್ತ ನೀಡಿದ್ದು ಇಂದು ಭಾರತವು ಗಾಜಾಕ್ಕೆ ನೆರವು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಮಧ್ಯೆ ಗಾಜಾ ಪಟ್ಟಿಯಲ್ಲಿರುವ ಕಲಹದಿಂದ ನಲುಗುತ್ತಿರುವ ಪ್ಯಾಲೆಸ್ಟೀನಿಯಾದವರಿಗೆ ಭಾರತ ಭಾನುವಾರ ಮಾನವೀಯ ನೆರವು ಕಳುಹಿಸಿದ್ದು ಇದರಲ್ಲಿ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಪ್ಯಾಲೆಸ್ಟೈನ್‌ಗೆ ಕಳುಹಿಸಲಾಗಿದೆ, ಈ ನೆರವು ಈಜಿಪ್ಟ್‌ನ ರಫಾ ಮೂಲಕ ಗಾಜಾಕ್ಕೆ ತೆರಳಲಿದೆ ಎಂದು ಹೇಳಲಾಗಿದೆ.
ಈ ಕುರಿತು ಟ್ವಿಟರ್ ‘ಎಕ್ಸ್’ ನಲ್ಲಿ ಮಾಹಿತಿ ಹಂಚಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಯುದ್ಧ ಪೀಡಿತ ಪ್ಯಾಲೆಸ್ಟೈನ್ ಜನರಿಗೆ ನೆರವಾಗುವ ನಿಟ್ಟಿನಲ್ಲಿ “ಐಎಎಫ್ ಸಿ -17 ವಿಮಾನ ಮೂಲಕ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಡಲಿದ್ದು, ವಸ್ತುಗಳನ್ನು ಈಜಿಪ್ಟ್ ಮತ್ತು ಗಾಜಾ ನಡುವಿನ ರಫಾ ಗಡಿ ದಾಟುವ ಮೂಲಕ ಪ್ಯಾಲೆಸ್ಟೈನ್‌ಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮಾನವೀಯ ನೆರವು “ಅಗತ್ಯ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಬೆಡ್ ಗಳು, ಟಾರ್ಪಾಲಿನ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು, ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ ಎಂದು ಬಾಗ್ಚಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: INDvsNZ; ಹಾರ್ದಿಕ್ ಅನುಪಸ್ಥಿತಿಯಿಂದ ತಂಡದ ಸಮತೋಲನಕ್ಕೆ ಪೆಟ್ಟು ಬಿದ್ದಿದೆ: ಕೋಚ್ ದ್ರಾವಿಡ್