Advertisement

INDvsBAN; ಅʼಸ್ಪಿನ್‌ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

11:27 AM Sep 22, 2024 | Team Udayavani |

ಚೆನ್ನೈ: ಬಾಂಗ್ಲಾದೇಶದ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು (Team India) ಅಧಿಕಾರಯುತ ಗೆಲುವು ಸಾಧಿಸಿದೆ. ಚೆನ್ನೈನಲ್ಲಿ (Chennai) ನಡೆದ ಪಂದ್ಯದ ನಾಲ್ಕನೇ ದಿನದಾಟದಲ್ಲೇ ಬಾಂಗ್ಲಾ ತಂಡವು 280 ರನ್‌ ಅಂತರದಿಂದ ಶರಣಾಗಿದೆ. ಇದರೊಂದಿಗೆ ಭಾರತವು ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

Advertisement

ಗೆಲುವಿಗೆ 515 ರನ್‌ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು 234 ರನ್‌ ಗಳಿಗೆ ಆಲೌಟಾಯಿತು. ಲೋಕಲ್‌ ಬಾಯ್‌ ಅಶ್ವಿನ್‌ ಅದ್ಭುತ ಬೌಲಿಂಗ್‌ ನಡೆಸಿ ಆರು ವಿಕೆಟ್‌ ಪಡೆದರು.

ಮೂರನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿದ್ದ ಬಾಂಗ್ಲಾಗೆ ಇಂದು ನಾಯಕ ನಜ್ಮುಲ್‌ ಹುಸೇನ್‌ ಶಾಂಟೋ ಸ್ವಲ್ಪ ಮಟ್ಟಿಗೆ ಆಧಾರ ನೀಡಿದರು. ಅವರು 82 ರನ್‌ ಗಳಿಸಿದರು. ಉಳಿದಂತೆ ಶಕೀಬ್‌ ಅಲ್‌ ಹಸನ್‌ 25 ರನ್‌ ಮಾಡಿದರು.

ಶಕೀಬ್‌ ಔಟಾದೊಡನೆ ತರಗೆಲೆ ಉರುಳಿದಂತೆ ವಿಕೆಟ್‌ ಬೀಳಲು ಆರಂಭವಾಯಿತು. ಅಶ್ವಿನ್-ಜಡೇಜಾ ಸ್ಪಿನ್‌ ಜಾಲಕ್ಕೆ ಸಿಲುಕಿದ ಬ್ಯಾಟರ್‌ ಗಳು ರನ್‌ ಗಳಿಸಲು ಪರದಾಡಿದರು.

Advertisement

ರವಿಚಂದ್ರನ್‌ ಅಶ್ವಿನ್‌ ಆರು ವಿಕೆಟ್‌ ಕಿತ್ತರೆ, ರವೀಂದ್ರ ಜಡೇಜಾ ಮೂರು ವಿಕೆಟ್‌ ಪಡೆದರು. ಒಂದು ವಿಕೆಟ್‌ ಬುಮ್ರಾ ಪಾಲಾಯಿತು.

ಸಂಕ್ಷಿಪ್ತ ಸ್ಕೋರ್‌

ಭಾರತ ಮೊದಲ ಇನ್ನಿಂಗ್ಸ್:‌ 376

ಬಾಂಗ್ಲಾ ಮೊದಲ ಇನ್ನಿಂಗ್ಸ್: 149

ಭಾರತ ಎರಡನೇ ಇನ್ನಿಂಗ್ಸ್: 287-4 ಡಿ

ಬಾಂಗ್ಲಾ ಎರಡನೇ ಇನ್ನಿಂಗ್ಸ್: 234

Advertisement

Udayavani is now on Telegram. Click here to join our channel and stay updated with the latest news.

Next