ನವ ದೆಹಲಿ : ಕೋವಿಡ್ 19 ವಿರುದ್ಧದ ಭಾರತದ ಹೋರಾಟದಲ್ಲಿ ರಷ್ಯಾದ ಸಹಾಯ ಮತ್ತು ಬೆಂಬಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ(ಏ. 28) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕೋವಿಡ್ ವಿರುದ‍್ಧದ ಹೋರಾಡಲು ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಮತ್ತಷ್ಟು ಬಲ ನೀಡಲು ವಿದೇಶಿ ಮತ್ತು ರಕ್ಷಣಾ ಮಂತ್ರಿಗಳ ನಡುವೆ “2 + 2 ಮಿನಿಸ್ಟ್ರಿಯಲ್ ಡೈಯಲಾಗ್” ನನ್ನು ಸ್ಥಾಪಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.
ಓದಿ : ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಮತ್ತೆ 15 ದಿನ ಲಾಕ್ಡೌನ್ ವಿಸ್ತರಣೆ
ಪುಟಿನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯ ನಂತರ ಸರಣಿ ಟ್ವೀಟ್‌ಗಳಲ್ಲಿ ಮಾಹಿತಿ ಹಂಚಿಕೊಂಡ ಮೋದಿ, ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಲಾಗಿದ್ದು, ವಿಶೇಷವಾಗಿ ಬಾಹ್ಯಾಕಾಶ ಪರಿಶೋಧನೆ ಮತ್ತು ಇಂಧನ ಕ್ಷೇತ್ರದಲ್ಲಿನ ನವೀಕರಣ, ಹೈಡ್ರೋಜನ್, ಆರ್ಥಿಕತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಲಾಯಿತು ಎಂದಿದ್ದಾರೆ.
“ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರೊಂದಿಗೆ ಇಂದು ಉತ್ತಮ ಸಂಭಾಷಣೆ ನಡೆಸಿದ್ದೇವೆ. ಹೆಚ್ಚುತ್ತಿರುವ ಕೋವಿಡ್ 19 ಪರಿಸ್ಥಿತಿಯನ್ನು ನಾವು ಚರ್ಚಿಸಿದ್ದೇವೆ. ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ರಷ್ಯಾದ ಸಹಾಯ ಮತ್ತು ಬೆಂಬಲಕ್ಕಾಗಿ ನಾನು ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಲಸಿಕೆಯಾದ ಸ್ಪುಟ್ನಿಕ್-ವಿ ನನ್ನು ಭಾರತಕ್ಕೆ ಒದಗಿಸುವುದಾಗಿ ರಷ್ಯಾ ಹೇಳಿದ್ದು, ಇತ್ತ ಕೇಂದ್ರ ಸರ್ಕಾರ ಕೂಡ ಸ್ಪುಟ್ನಿಕ್ ವಿ ಬಳಕೆಗೆ ಅನುಮೋದಿಸಿದೆ.
ಓದಿ : ಕಾರಿನ ಟೈರ್ ಪಂಕ್ಚರ್ ಹಾಕುವ ವಿಡಿಯೋ ಮಾಡಿಸಿ ಪಬ್ಲಿಸಿಟಿ ಪಡೆಯೋದಲ್ಲ : ಶಾಸಕ ಸಾರಾ ಮಹೇಶ್