ನವದೆಹಲಿ: ಭಾರತದಲ್ಲಿ ಮಂಗಳವಾರ(ಫೆ.2, 2021) 8635 ಕೋವಿಡ್ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, ಇದು ಕಳೆದ ಎಂಟು ತಿಂಗಳಲ್ಲಿಯೇ ಅತೀ ಕಡಿಮೆ ಪ್ರಮಾಣದ್ದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.
ಇದನ್ನೂ ಓದಿ:83 ತೇಜಸ್ ಯುದ್ಧ ವಿಮಾನ ಖರೀದಿ: HAL ಜತೆ 48 ಸಾವಿರ ಕೋಟಿ ರೂ. ಒಪ್ಪಂದ: ಕೇಂದ್ರ
ದೇಶದಲ್ಲಿ 1,07,66,245 ಕೋವಿಡ್ ಪ್ರಕರಣಗಳಿದ್ದು, ಈವರೆಗೆ 1,54,486 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಕಳೆದ 24ಗಂಟೆಯಲ್ಲಿ 93 ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಕಳೆದ 9 ತಿಂಗಳ ಬಳಿಕ ಸಾವಿನ ಸಾವಿನ ಸಂಖ್ಯೆ 100ಕ್ಕೆ ಇಳಿದಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 13,423 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡು ಡಿಸ್ ಚಾರ್ಜ್ ಆಗಿದ್ದು, ಇದರೊಂದಿಗೆ ದೇಶದಲ್ಲಿ 1,63,353 ಸಕ್ರಿಯ ಕೋವಿಡ್ ಪ್ರಕರಣಗಳಿರುವುದಾಗಿ ವರದಿ ಹೇಳಿದೆ.
ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ, ಫೆ.1ರವರೆಗೆ ಒಟ್ಟು 19, 77, 52,057 ಸ್ಯಾಂಪಲ್ಸ್ ಪರೀಕ್ಷಿಸಲಾಗಿದೆ. ಇದರಲ್ಲಿ 6,59,422 ಸ್ಯಾಂಪಲ್ಸ್ ಅನ್ನು ಸೋಮವಾರ (ಫೆ.1) ಪರೀಕ್ಷಿಸಲಾಗಿತ್ತು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದ್ದು, ಈವರೆಗೆ 39, 50,156 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ವಿವರಿಸಿದೆ.