ನವ ದೆಹಲಿ : ಭಾರತದಲ್ಲಿ ಮತ್ತೆ ಕೋವಿಡ್ ಸೋಂಕಿನ ಹೊಸ ಪ್ರಕರಣಗಳ ಪ್ರಮಾಣ ಮತ್ತೆ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 42, 625 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 562 ಮಂದಿ ಸಾವನ್ನಪ್ಪಿದ್ದಾರೆ. 36, 668 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಇಂದು(ಬುಧವಾರ, ಆಗಸ್ಟ್ 4) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
24 ಗಂಟೆಗಳಲ್ಲಿ ದಾಖಲಾದ ಹೊಸ ಕೋವಿಡ್ ಸೋಂಕಿನ ಪರಿಣಾಮದಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 3,13,69. 132 ಕ್ಕೆ ಏರಿಕೆಯಾಗಿದ್ದು, ಗುಣಮುಖರಾದವರ ಸಂಖ್ಯೆ 3,09,33,022 ಕ್ಕೆ ಹೆಚ್ಚಳವಾಗಿದ್ದು, ಒಟ್ಟು ಮೃತ ಪಟ್ಟವರ ಸಂಖ್ಯೆ 4, 25, 757ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : BREAKING : ಈ ಶಾಸಕರಿಗೆ ಸಚಿವ ಸ್ಥಾನ ಖಚಿತ : ಖುದ್ದು ಸಿಎಂ ಬೊಮ್ಮಾಯಿ ದೂರವಾಣಿ ಕರೆ
ಸಕ್ರಿಯ ಪ್ರಕರಣಗಳ ಸಂಖ್ಯೆ 4,10,353 ಕ್ಕೆ ಏರಿದೆ, ಇದು ಒಟ್ಟು ಪ್ರಕರಣಗಳ ಶೇಕಡಾ 1.29 ರಷ್ಟಿದೆ. ದೈನಂದಿನ ಪಾಸಿಟಿವಿಟಿ ರೇಟ್ ಶೆಕಡಾ 2.31 , ವಾರದ ಪಾಸಿಟಿವಿಟಿ ರೇಟ್ ಶೇಕಡಾ 2.36 ಮತ್ತು ಚೇತರಿಕೆ ಪ್ರಮಾಣ ಶೇಕಡಾ 97.37 ರಲ್ಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಾಹಿತಿಯ ಪ್ರಕಾರ ಒಟ್ಟು ಈವರೆಗೆ 47,31,42,307 ಮಾದರಿಗಳನ್ನು ಕೋವಿಡ್ -19 ಗಾಗಿ ಪರೀಕ್ಷಿಸಲಾಗಿದೆ, ಕಳೆದ 24 ಗಂಟೆಗಳಲ್ಲಿ 18,47,518 ಪರೀಕ್ಷಿಸಲಾಗಿದೆ ಎಂದು ತಿಳಿಸಿದೆ.
ಇನ್ನು, ಈವರೆಗೆ ದೇಶದಲ್ಲಿ ನೀಡಲಾದ ಕೋವಿಡ್ ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 48,52,86,570 ಕ್ಕೆ ತಲುಪಿದ್ದು, ಅದರಲ್ಲಿ ಕಳೆದ 24 ಗಂಟೆಗಳಲ್ಲಿ 62,53,741 ಡೋಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಮೊದಲ ಬಾರಿಗೆ ಸಾರ್ವಕಾಲಿಕ 54 ಸಾವಿರ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್