ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 41,195 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸಕ್ರಿಯ ಕೋವಿಡ್ ಸೋಂಕಿನ ಪ್ರಮಾಣ 3,87,987 ಕ್ಕೆ ತಲುಪಿದ್ದು, ಈಗ ಒಟ್ಟು ಪ್ರಕರಣಗಳ ಶೇಕಡಾ 1.21 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು(ಗುರುವಾರ, ಆಗಸ್ಟ 12) ಮಾಹಿತಿ ನೀಡಿದೆ.
490 ಜನರು ಕೊವಿಡ್ 19 ಗೆ ಬಲಿಯಾಗಿದ್ದು, ಈ ಮೂಲಕ ಒಟ್ಟು ಸಾವಿನ ಸಂಖ್ಯೆ 4,29,669ಕ್ಕೆ ಏರಿಕೆಯಾಗಿದೆ. ಇನ್ನು, 31,260,050 ಜನರು ಚೇತರಿಸಿಕೊಂಡಿದ್ದಾರೆ. ಈ ಮೂಲಕ ಚೇತರಿಕೆಯ ಪ್ರಮಾಣ ಶೇಕಡಾ 97.45 ರಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ : Sensex rises over 150 pts in early trade; Nifty above 16,300
ಕೊವಿಡ್ 19 ಲಸಿಕೆ ವ್ಯಾಪ್ತಿಯು 52 ಕೋಟಿ (52,32,53,450) ಮೈಲಿಗಲ್ಲನ್ನು ದಾಟಿದೆ. ದೈನಂದಿನ ಪಾಸಿಟಿವಿಟಿ ರೇಟ್ ಕಳೆದ 17 ದಿನಗಳಿಂದ ಶೇಕಡಾ 3 ಕ್ಕಿಂತ ಕಡಿಮೆಯಿದೆ ಮತ್ತು ಪ್ರಸ್ತುತ ಇದು 1.94 ಶೇಕಡಾದಲ್ಲಿದೆ. ಭಾರತದಾದ್ಯಂತ ಒಟ್ಟು 48.73 ಕೋಟಿ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ( ಐಸಿಎಂಆರ್), ಆಗಸ್ಟ್ 11 ರವರೆಗೆ9 ನಿನ್ನೆ(ಬುಧವಾರ, ಆಗಸ್ಟ್ 11) ಪರೀಕ್ಷಿಸಿದ 21,24,953 ಮಾದರಿಗಳು ಸೇರಿದಂತೆ) ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 48,73,70,196 ಆಗಿದೆ. ದೇಶಾದ್ಯಂತ ಲಸಿಕಾ ಅಭಿಯಾನದಡಿಯಲ್ಲಿ 52.36 ಕೋಟಿ ಕೋವಿಡ್ -19 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 44,19,627 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ : ಶಾಸಕ ಸತೀಶ್ ರೆಡ್ಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!