ನವ ದೆಹಲಿ : ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 35, 499 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 447 ಮಂದಿ ಮೃತಪಟ್ಟಿದ್ದಾರೆಂದು ಇಂದು(ಸೋಮವಾರ, ಆಗಸ್ಟ್ 9) ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗೊಳಿಸಿದ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶದ ಸಕ್ರಿಯ ಕೋವಿಡ್ ಪ್ರಕರಣಗಳು 4,634 ರಷ್ಟು ಕಡಿಮೆಯಾಗಿದ್ದು, ಒಟ್ಟಾರೆ ಕೋವಿಡ್ ಸೋಂಕಿನ ಸಕಕ್ರಿಯ ಪ್ರಕರಣ 4,02,188 ಕ್ಕೆ ತಲುಪಿದೆ. ಇನ್ನು, ಒಟ್ಟು 39, 686 ಮಂದಿ ಕಳೆದೊಂದು ದಿನದಲ್ಲಿ ಗುಣಮುಖರಾಗಿದ್ದು, ಈ ಮೂಲಕ ಸೋಂಕಿನಿಂದ ಚೇತರಿಸಿಕೊಂಡವರ ೊಟ್ಟು ಸಂಖ್ಯೆ 3,11,39,457 ಕ್ಕೆ ಹೆಚ್ಚಳವಾಗಿದೆ. ದೇಶದ ಚೇತರಿಕೆಯ ಪ್ರಮಾಣವು ಶೇಕಡಾ 97.4 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : ಬಿಗಿ ಉಡುಪು ಧರಿಸಿದ್ದಾರೆಂಬ ಕಾರಣಕ್ಕೆ ಯುವತಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನ್!
ಒಂದು ದಿನದ ಅವಧಿಯಲ್ಲಿ ಒಟ್ಟು 13,71,871 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇನ್ನು, ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಅಡಿಯಲ್ಲಿ ಈವರೆಗೆ ನೀಡಲಾದ ಕೋವಿಡ್ 19 ಲಸಿಕೆಗಳು 50,86,64,759 ಕ್ಕೆ ಏರಿದ್ದು, ಭಾನುವಾರ 16,11,590 ಡೋಸ್ ಗಳನ್ನು ನೀಡಲಾಗಿದೆ ಎಂದು ಕೂಡ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು, ಕಳೆದ 24 ಗಂಟೆಯಲ್ಲಿ ದೇಶದಲ್ಲಿಯೇ ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ದಿನವೊಂದರಲ್ಲಿ 18,607 ಹೊಸ ಕೋವಿಡ್ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 5,508, ಆಂಧ್ರ ಪ್ರದೇಶದಲ್ಲಿ 2,050, ತಮಿಳುನಾಡಿನಲ್ಲಿ 1,956 ಹಾಗೂ ಕರ್ನಾಟಕದಲ್ಲಿ 1, 598 ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರದಲ್ಲಿ ಸೋಂಕಿನಿಂದ 151 ಮಂದಿ ಸಾವನ್ನಪ್ಪದರೇ, ಕೇರಳದಲ್ಲಿ 93 ಮಂದಿ ಸಾವನ್ನಪ್ಪಿದ್ದಾರೆ. ಶೇಕಡಾ 83.7 ರಷ್ಟು ಹೊಸ ಸೋಂಕಿನ ಪ್ರಕರಣವನ್ನು ಈ ಐದು ರಾಜ್ಯಗಳಲ್ಲಿ ದಾಖಲಾಗಿದ್ದು, ಈ ಪೈಕಿ ಕೇರಳವೊಂದರಲ್ಲೇ ಶೇಕಡಾ 52.4 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : ರಾಹುಲ್ ರ ಟ್ವೀಟರ್ ಖಾತೆಯನ್ನು ಬ್ಲಾಕ್ ಮಾಡಬಹುದು, ಅವರ ಜನ ಪರ ಧ್ವನಿಯನ್ನಲ್ಲ: ಕಾಂಗ್ರೆಸ್