Advertisement

ಕಳೆದ 24ಗಂಟೆಯಲ್ಲಿ ದೇಶದಲ್ಲಿ 30,941 ಕೋವಿಡ್ ಪ್ರಕರಣಗಳು ಪತ್ತೆ | 350 ಮಂದಿ ಸೋಂಕಿಗೆ ಬಲಿ

10:56 AM Aug 31, 2021 | Team Udayavani |

ನವ ದೆಹಲಿ : ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 30, 941 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 350 ಮಂದಿ ಮೃತಪಟ್ಟಿರುವುದಾಗಿ ಇಂದು (ಆಗಸ್ಟ್ 31, ಮಂಗಳವಾರ) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.

Advertisement

ಇದನ್ನೂ ಓದಿ : ಕಾಬೂಲ್ ತೊರೆದ ಅಮೆರಿಕ ಸೇನಾ ಪಡೆ : ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ

ದೇಶದಾದ್ಯಂತ ದಾಖಲಾಗಿರುವ ಒಟ್ಟು ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ 19,622 ಹೊಸ ಸೋಂಕು ಕೇರಳವೊಂದರಲ್ಲೇ ಪತ್ತೆಯಾಗಿದ್ದು, ಕೇರಳದಲ್ಲಿ ಸೋಂಕಿಗೆ ಕಳೆದೊಂದು ದಿನದ ಅವಧಿಯಲ್ಲಿ 132 ಮಂದಿ ಸಾವಿಗೀಡಾಗಿದ್ದಾರೆಂದು ಕೂಡ ತಿಳಿಸಿದೆ. ಇನ್ನು, ದೇಶದಾದ್ಯಂತ 3,70,640 ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ ಶೇಕಡಾ 1.13 ರಷ್ಟು ಸಕ್ರಿಯ ಪ್ರಕರಣಗಳಿವೆ.

ಈವರೆಗೆ ದೇಶದಾದ್ಯಂತ 52.15 ಕೋಟಿಯಷ್ಟು ಕೋವಿಡ್ ಸೋಂಕಿನ ಪರೀಕ್ಷೆಗಳು ನಡೆದಿದ್ದು, ಸದ್ಯಕ್ಕೆ ಒಟ್ಟು ಪಾಸಿಟಿವಿಟಿ ರೇಟ್ ಶೇಕಡಾ 2.22 ಇದೆ. ಲಸಿಕಾ ಅಭಿಯಾನದ ಅಡಿಯಲ್ಲಿ ಈವರೆಗೆ ದೇಶದಲ್ಲಿ ಒಟ್ಟು 64.05 ಕೋಟಿ ಲಸಿಕಾ ಡೋಸ್ ಗಳನನು ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ : ರಣಜಿ ಟ್ರೋಫಿ: ಒಂದೇ ಗುಂಪಿನಲ್ಲಿ ಕರ್ನಾಟಕ, ಮುಂಬೈ, ದೆಹಲಿ ತಂಡಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next