Advertisement

ಏಕದಿನ ಶ್ರೇಯಾಂಕ: ಅಗ್ರಸ್ಥಾನಕ್ಕೇರಿದ ಭಾರತ

06:25 AM Feb 06, 2018 | Team Udayavani |

ದುಬಾೖ: ದಕ್ಷಿಣ ಆಫ್ರಿಕಾ ವಿರುದ್ಧ 6 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಭಾರತ ತಂಡ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಆದರೆ ಸರಣಿಯಲ್ಲಿ ಇನ್ನೂ 4 ಪಂದ್ಯಗಳು ಬಾಕಿ ಉಳಿದಿದ್ದು, ಈ ಸ್ಥಾನ ಕಾಯ್ದುಕೊಳ್ಳಬೇಕಾದರೆ ಟೀಮ್‌ ಇಂಡಿಯಾ 4-2 ಅಂತರದ ಗೆಲುವು ಸಾಧಿಸುವುದು ಅನಿವಾರ್ಯ. ಹೀಗಾಗಿ ಸರಣಿ ಮುಗಿದ ಬಳಿಕವಷ್ಟೇ ಅಧಿಕೃತ ರ್‍ಯಾಂಕಿಂಗ್‌ ಪ್ರಕಟಗೊಳ್ಳಲಿದೆ.

Advertisement

ಸರಣಿ ಆರಂಭಕ್ಕೂ ಮುನ್ನ ಭಾರತ 2ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದಾಗ ಉಭಯ ತಂಡಗಳು ತಲಾ 120 ಅಂಕಗಳೊಂದಿಗೆ ಸಮಬಲಕ್ಕೆ ಬಂದವು. ಸೆಂಚುರಿಯನ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ 9 ವಿಕೆಟ್‌ ಜಯಭೇರಿ ಮೊಳಗಿಸಿ ಒಟ್ಟು 121 ಅಂಕದೊಂದಿಗೆ ಅಗ್ರಸ್ಥಾನಕ್ಕೆ ಜಿಗಿಯಿತು. ಸತತ 2 ಪಂದ್ಯಗಳ ಸೋಲಿನಿಂದ ದಕ್ಷಿಣ ಆಫ್ರಿಕಾ (119 ಅಂಕ) 2ನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ ಇಂಗ್ಲೆಂಡ್‌ (116), ನ್ಯೂಜಿಲ್ಯಾಂಡ್‌ (115), ಆಸ್ಟ್ರೇಲಿಯ (112) ತಂಡಗಳು ಅನಂತರದ ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next