Advertisement

ದೇಶದಲ್ಲಿ ಒಂದೇ ದಿನ 69,878 ಹೊಸ ಕೋವಿಡ್ ಪ್ರಕರಣಗಳು: ಚೇತರಿಕೆ ಪ್ರಮಾಣ 74.69%

10:52 AM Aug 22, 2020 | Mithun PG |

ನವದೆಹಲಿ: ಭಾರತದಲ್ಲಿ ಒಟ್ಟಾರೆಯಾಗಿ ಕೋವಿಡ್ ಸೋಂಕಿತರ ಸಂಖ್ಯೆ 3 ಮಿಲಿಯನ್ ಗಡಿತಲುಪಿದೆ. ಆ ಮೂಲಕ ಜಾಗತಿಕ ವೈರಾಣು ಪೀಡಿತ ದೇಶಗಳ ಪೈಕಿ ಅಮೆರಿಕಾ, ಬ್ರೆಜಿಲ್ ನಂತರದ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಕಳೆದ 24 ಗಂಟೆಗಳ ಅವಧಿಯಲ್ಲಿ 69,878 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಇವರೆಗೆ ದಾಖಲಾದ ಗರಿಷ್ಟ ಪ್ರಮಾಣವಾಗಿದೆ. ಸುಮಾರು 945 ಜನ ಕಳೆದ ಒಂದು ದಿನದಲ್ಲಿ ಮೃತಪಟ್ಟಿದ್ದು, ಇವರೆಗೂ 55,794 ಜನರು ಕೋವಿಡ್ ಗೆ ಬಲಿಯಾದಂತಿದೆ.

ಒಟ್ಟಾರೆಯಾಗಿ ದೇಶದಲ್ಲಿ 29,75,701 ಜನರಿಗೆ ಸೋಂಕು ದೃಢಪಟ್ಟಿದ್ದು, 6,97,330 ಸಕ್ರೀಯ ಪ್ರಕರಣಗಳಿವೆ.  ಅದಾಗ್ಯೂ ಭಾರತದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ 74.69% ಗೆ ಎರಿಕೆಯಾಗಿದ್ದು ಆಶಾದಾಯಕ ಬೆಳವಣಿಗೆಯಾಗಿದೆ.

ಒಂದೆ ದಿನದಲ್ಲಿ 63.631 ಜನರು ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ 22,22,577 ಜನರು ಗುಣಮುಖರಾದಂತಾಗಿದೆ. ಪ್ರತಿನಿತ್ಯ ದೇಶದಲ್ಲಿ 1 ಮಿಲಿಯನ್ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next