Advertisement

ದೇಶದಲ್ಲಿ ಕೋವಿಡ್-19 ರುದ್ರನರ್ತನ: ಒಂದೇ ದಿನ 613 ಬಲಿ, 24,850 ಜನರಿಗೆ ಸೋಂಕು

12:37 PM Jul 05, 2020 | Mithun PG |

ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಕೋವಿಡ್ -19 ಆರ್ಭಟಿಸಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 24,850 ಜನರಿಗೆ ಸೋಂಕು ತಗುಲಿದೆ.ಮಾತ್ರವಲ್ಲದೆ ಒಂದೇ ದಿನ 613 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 6,73,165 ಕ್ಕೆ ತಲುಪಿದೆ.

Advertisement

ದೇಶದಲ್ಲಿ ಕೋವಿಡ್ ಕಾರಣದಿಂದ ಸಾವನ್ನಪ್ಪಿದ್ದವರ ಸಂಖ್ಯೆ 19,268ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ 2,44,481 ಸಕ್ರೀಯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ  ನೀಡಿದೆ.

ಒಟ್ಟಾರೆ ಸೊಂಕು ಪೀಡಿತರಲ್ಲಿ 4,09,082 ಜನರು ಗುಣಮುಖರಾಗಿದ್ದು, ಕಳೆದ ಒಂದು ದಿನದಲ್ಲಿ 14,856 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ.  ಕಳೆದ 3 ದಿನದಲ್ಲಿ ಸತತವಾಗಿ ದೇಶದಲ್ಲಿ 20 ಸಾವಿರಕ್ಕಿಂತ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕಿನಿಂದ ಮುಕ್ತರಾಗುವವರ ಪ್ರಮಾಣ ಶೇ 60.80 ರಷ್ಟಿದೆ.

ಭಾರತದ ಒಟ್ಟು 14 ರಾಜ್ಯಗಳಲ್ಲಿ 10,000 ಕ್ಕಿಂತ ಅಧಿಕ ಮಂದಿಗೆ ವೈರಾಣು ಭಾಧಿಸಿದ್ದು, ವೈರಸ್ ಆರ್ಭಟಕ್ಕೆ ಮಹಾರಾಷ್ಟ್ರ ನಲುಗಿಹೋಗಿದೆ.  ಇಲ್ಲಿ ಸುಮಾರು 2 ಲಕ್ಷ ಕ್ಕಿಂತ ಹೆಚ್ಚು ಸೋಂಕಿತರಿದ್ದು 8,671 ಜನರು ಮೃತಪಟ್ಟಿದ್ದಾರೆ. ಗಮನಾರ್ಹ ಸಂಗತಿಯೆಂದರೇ ಈ ರಾಜ್ಯದಲ್ಲಿ ಮೊದಲ 1 ಲಕ್ಷ ಪ್ರಕರಣಗಳು 96 ದಿನಗಳಲ್ಲಿ ದಾಖಲಾಗಿದ್ದವು. ಆದರೇ 1 ರಿಂದ 2 ಲಕ್ಷ ತಲುಪಲು ಕೇವಲ 22 ದಿನಗಳು ಬೇಕಾದವು.
ಹೆಚ್ಚುತ್ತಿರುವ ಪ್ರಕರಣಗಳನ್ನು ನಿಭಾಯಿಸಲು ರಾಜ್ಯದ ಆರೋಗ್ಯಇಲಾಖೆ ಸಿದ್ಧವಾಗಿದೆ. ಮಾತ್ರವಲ್ಲದೆ ಜುಲೈ ಮತ್ತು ಆಗಸ್ಟ್ ತಿಂಗಳು ನಮಗೆ ನಿರ್ಣಾಯಕ ಎಂದು ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಸಚಿವ ಅಮಿತ್ ದೇಶ್ ಮುಖ್ ತಿಳಿಸಿದ್ದಾರೆ.

Advertisement

ಮತ್ತೊಂದೆಡೆ ಚೆನ್ನೈ ನಲ್ಲೂ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದು, ದೆಹಲಿಯಲ್ಲೂ  97 ಸಾವಿರಕ್ಕಿಂತ ಹೆಚ್ಚು ಜನರಿಗೆ ವೈರಾಣು ಇರುವುದು ಖಚಿತವಾಗಿದೆ. ಜಗತ್ತಿನಲ್ಲಿ ಭಾರತ ಕೋವಿಡ್ ಹಾಟ್ ಸ್ಪಾಟ್ ಗಳಲ್ಲಿ 4ನೇ ರಾಷ್ಟ್ರ ಎನಿಸಿಕೊಂಡಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕಾ,ಬ್ರೆಜಿಲ್, ರಷ್ಯಾಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next