ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 38,353 ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 497 ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ(ಆಗಸ್ಟ್ 11) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು ಸೇರಿ 12 ನಗರ ಮುಳುಗಡೆ?
ದೇಶದಲ್ಲಿ ಕೋವಿಡ್ ನಿಂದ ಈವರೆಗೆ 4,29,179 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3,86,351ಕ್ಕೆ ಇಳಿಕೆಯಾಗಿದ್ದು, ಇದು ಕಳೆದ 140 ದಿನಗಳ ನಂತರದ ಕನಿಷ್ಠ ಪ್ರಮಾಣವಾಗಿದೆ.
ಕಳೆದ 24ಗಂಟೆಗಳಲ್ಲಿ 2,157 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಕಳೆದ 24ಗಂಟೆಗಳಲ್ಲಿ 40,013 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೆ ದೇಶದಲ್ಲಿ ಕೋವಿಡ್ ನಿಂದ 3,12,20,981 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.97.45ರಷ್ಟಿದೆ. ದಿನದ ಪಾಸಿಟಿವಿಟಿ ದರ 2.16ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ.2.34ರಷ್ಟಿದೆ ಎಂದು ಸಚಿವಾಲಯದ ಅಂಕಿಅಂಶ ತಿಳಿಸಿದೆ. ಈವರೆಗೆ ದೇಶದಲ್ಲಿ 51.90 ಕೋಟಿ ಡೋಸ್ ನೀಡಲಾಗಿದೆ.