ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,830 ಕೋವಿಡ್ ಹೊಸ ಪ್ರಕರಣಗಳು ಪತ್ತಯಾಗಿದೆ. ಶನಿವಾರ ಪತ್ತೆಯಾದ ಪ್ರಕರಣಗಳ ಸಂಖ್ಯೆಗಿಂತ ಇದು ಶೇ.10.4 ರಷ್ಟು ಕಡಿಮೆಯಾಗಿದೆ,
ದೇಶದಲ್ಲಿ ಇದುವರೆಗೆ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 3,42,73,300ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ರಿಕವರಿ ದರ ಶೇ.98.2 ರಷ್ಟಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 446 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಇದರಿಂದ ಸಾವಿನ ಸಂಖ್ಯೆ 4,58,186ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಭಾರತವಿಂದು ಆಂತರಿಕ- ಬಾಹ್ಯ ಸವಾಲನ್ನು ಎದುರಿಸಲು ಸಮರ್ಥವಾಗಿದೆ: ಪ್ರಧಾನಿ ಮೋದಿ
ಕೇರಳದಲ್ಲಿ ಅತೀ ಹೆಚ್ಚು ಅಂದರೆ 7,427 ಪ್ರಕರಣಗಳು ಪತ್ತೆಯಾಗಿದ್ದರೆ, ತಮಿಳುನಾಡಿನಲ್ಲಿ 1,021 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 980 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 614 ಪ್ರಕರಣಗಳು ಮತ್ತು ಮಿಜೋರಾಂನಲ್ಲಿ 579 ಪ್ರಕರಣಗಳು ಪತ್ತೆಯಾಗಿದೆ. ಈ ಐದು ರಾಜ್ಯಗಳಲ್ಲೇ ದೇಶದ ಶೇ 82.79 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಕೇರಳ ರಾಜ್ಯವೊಂದರಲ್ಲೇ ಶೇ.57.89 ರಷ್ಟು ಪ್ರಕರಣಗಳು ಪತ್ತೆಯಾಗಿದೆ.
ಕೇರಳ ರಾಜ್ಯವೊಂದರಲ್ಲೇ ಅತೀ ಹೆಚ್ಚು ಅಂದರೆ 358 ಮಂದಿ ಸೋಂಕಿತರು ಸಾವನ್ನಪ್ಪಿದರೆ, ಮಹಾರಾಷ್ಟ್ರದಲ್ಲಿ 26 ಮಂದಿ ಕೋವಿಡ್ ಸೋಂಕಿತರು ಮೃತರಾಗಿದ್ದಾರೆ.