Advertisement

ಹುಸಿ ಸೆಕ್ಯುಲರಿಸಂನ ಗುರುತಿಸುತ್ತಿದೆ ಭಾರತ

01:57 AM Jan 16, 2020 | Sriram |

ಯಾರು “ಅಸಹಿಷ್ಣು ಭಾರತ’ ಎಂಬ ಆಂದೋಲನ ಆರಂಭಿಸಿದರೋ, ಯಾರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದರೋ ಮತ್ತು ಯಾರು ತುಕ್ಡೆ ತುಕ್ಡೆ ಗ್ಯಾಂಗ್‌ಗಳ ಪರವಾಗಿ ನಿಂತರೋ ಅವರನ್ನು ಇಂದು ಭಾರತ ಪ್ರಶ್ನಿಸಲಾರಂಭಿಸಿದೆ.

Advertisement

ಇತ್ತೀಚಿನ ಪ್ರತಿಭಟನೆಗಳನ್ನೆಲ್ಲ ನೋಡಿದ ಮೇಲೆ ಒಂದು ಅಂಶವಂತೂ ಸ್ಪಷ್ಟವಾಗುತ್ತಿದೆ. ದೇಶದಲ್ಲಿನ ಕೋಮು ಸ್ಥಿತಿ ಹಾಳಾಗುವಲ್ಲಿ ಕಾಂಗ್ರೆಸ್‌, ಸೋಕಾಲ್ಡ್‌ ಸೆಕ್ಯುಲರ್‌ ಪಕ್ಷಗಳು ಮತ್ತು ಕೆಲ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಸುಲಭವಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ, ಇವುಗಳನ್ನೆಲ್ಲ ಪ್ರತ್ಯೇಕವಾಗಿ ಗುರುತಿಸುವ ಬದಲಾಗಿ “ಗ್ಯಾಂಗ್‌’ ಎಂದು ಕರೆದಿದ್ದೇನೆ. ಇವುಗಳೆಲ್ಲ ಪರಸ್ಪರ ಕೈಜೋಡಿಸಿವೆ ಮತ್ತು ಜನರಿಗೆ ಇವುಗಳ ಪರಿಚಯ ಇದ್ದೇ ಇದೆ. ಕೆಲ ದಶಕಗಳ‌ ಹಿಂದೆ, ಸಶಸ್ತ್ರ ಸೇನೆಯಲ್ಲಿದ್ದ ನಾನು ಮತ್ತು ಇತರೆ ವೃತ್ತಿಗಳಲ್ಲಿದ್ದ ನನ್ನ ಗೆಳೆಯರು, ಬಿಜೆಪಿ/ಜನಸಂಘ ಸೇರಿದಂತೆ ಹಿಂದುತ್ವ ಶಕ್ತಿಗಳೊಂದಿಗೆ ಗುರುತಿಸಿಕೊಳ್ಳಲು ಎಂದಿಗೂ ಬಯಸುತ್ತಿರಲಿಲ್ಲ. ಈ ಹಿಂದುತ್ವ ಶಕ್ತಿಗಳಿಗೆ ಎಲ್ಲವನ್ನೂ ಧರ್ಮದ ಕನ್ನಡಕದಿಂದ ನೋಡುವ ತುಡಿತವಿದೆ ಎಂದು ನಾವು ಭಾವಿಸಿದ್ದೆವು. ಈ ಕಾರಣಕ್ಕಾಗಿಯೇ, ನಮ್ಮಲ್ಲಿ ಅನೇಕರು ಬಿಜೆಪಿಗೆ ಮತ ನೀಡುತ್ತಿರಲಿಲ್ಲ.

ಬಹುಶಃ ಬಹುತೇಕ ಭಾರತೀಯರೂ ಬಿಜೆಪಿ(ಅಂದಿನ ಜನಸಂಘವನ್ನು) ಅನುಮಾನದಿಂದಲೇ ನೋಡುತ್ತಿದ್ದರು ಎನಿಸುತ್ತದೆ. ಇದರ ಪರಿಣಾಮವಾಗಿ, ಅಂದಿನ ಜನಸಂಘಕ್ಕೆ ಮತ್ತು ಅದರ ಹೊಸ ಅವತಾರ ಬಿಜೆಪಿಗೆ ಅನೇಕ ವರ್ಷಗಳವರೆಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಲೋಕಸಭೆಯಲ್ಲಿ ಹೆಚ್ಚೆಂದರೆ 5-10 ಸ್ಥಾನ ಸಿಗುತ್ತಿತ್ತು. ಒಂದು ಸಮಯದಲ್ಲಂತೂ ಈ ಪಕ್ಷಗಳ ಒಬ್ಬೇ ಒಬ್ಬ ಚುನಾಯಿತ ಪ್ರತಿನಿಧಿ ಲೋಕಸಭೆಯಲ್ಲಿದ್ದರು.

ಒಂದು ವಿಷಯವನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಮೆಚ್ಚಲೇಬೇಕು. ಏನೆಂದರೆ, ಹಿಂದೂಗಳು ಮತ್ತು ಸಿಕ್ಖರು ಅನೇಕ ರಕ್ತಸಿಕ್ತ ಚರಿತ್ರೆಗಳಿಗೆ, ಹಿಂಸೆಗೆ ಮತ್ತು 1947ರಲ್ಲಿ ತಮ್ಮ ನೆಲದ ವಿಭಜನೆಗೆ ಸಾಕ್ಷಿಯಾದರೂ ಕೂಡ ಈ ಸಮುದಾಯದವರು ಕಾಂಗ್ರೆಸ್‌ ಜತೆಗೆ ನಿಂತಿದ್ದರು. ಇವರು ಮುಂದೆ ಜನಸಂಘಕ್ಕೆ ಬೆಂಬಲ ನೀಡಲಿಲ್ಲ. ಇದು ಹಿಂದೂಗಳು ಮತ್ತು ಸಿಖ್‌V ಸಮುದಾಯಗಳಲ್ಲಿನ ಜಾತ್ಯತೀತತೆ ಮತ್ತು ಸಹಿಷ್ಣುತೆಗೆ ಸಾಕ್ಷಿ.

ಹೀಗಾಗಿ, ಒಂದು ಮಾತನ್ನಂತೂ ಹೇಳಬಹುದು. ಭಾರತವೇನಾದರೂ ಸೆಕ್ಯುಲರಿಸಂಗೆ ಅಂಟಿಕೊಂಡಿದ್ದರೆ ಮತ್ತು ಜಾತ್ಯತೀತತೆಯನ್ನು ಬೆಂಬಲಿಸುವ ಪಕ್ಷಗಳಿಗೆ ಮತ ನೀಡುತ್ತಾ ಬಂದಿದ್ದರೆ, ಇದರ ಶ್ರೇಯಸ್ಸು ಸಿಗಬೇಕಾದದ್ದು ಹಿಂದೂಗಳು ಮತ್ತು ಸಿಕ್ಖರಿಗೆ. ವಿಭಜನೆಯ ಪರಿಣಾಮಗಳನ್ನು ಎದುರಿಸಿದ ಮೇಲೂ ಈ ಸಮುದಾಯಗಳು ಸಂಕಲ್ಪಶಕ್ತಿಯನ್ನು ಮೆರೆದವು.

Advertisement

ಆದಾಗ್ಯೂ, ಕಳೆದ ಕೆಲವು ದಶಕಗಳಿಂದ ಪರಿಸ್ಥಿತಿ ಬದಲಾಗಿದೆ. ಇದೇ ಸಹಿಷ್ಣು, ಜಾತ್ಯತೀತ ಹಿಂದೂ ಈಗ ನಲುಗಿಹೋಗಿದ್ದಾನೆ. ಭಾರತದಲ್ಲಿ ಈಗ ಆಚರಣೆಯಲ್ಲಿರುವ ಜಾತ್ಯತೀತೆಯ ಕುರಿತು ಆತನ ನಂಬಿಕೆ ಛಿದ್ರವಾಗಿದೆ. ಈಗ ನಾವು ಈ “ಗ್ಯಾಂಗ್‌’ ಅನ್ನು(ಕಾಂಗ್ರೆಸ್‌, ಜಾತ್ಯತೀತ ಪಕ್ಷಗಳು, ಕೆಲ ಮಾಧ್ಯಮಗಳು ಇತ್ಯಾದಿ) ಸೆಲೆಕ್ಟಿವ್‌ ಆಗಿ ಮಾತನಾಡುವ ಹುಸಿ ಜಾತ್ಯತೀತವಾದಿಗಳು ಎಂದು ಕರೆಯುತ್ತೇವೆ.

ಇದೇ ಸಹಿಷ್ಣು ಹಿಂದು ಈಗ ವಂಚನೆಗೊಳಗಾದ ಭಾವನೆಯನ್ನು ಎದುರಿಸುತ್ತಿದ್ದಾನೆ. ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು, ಆರ್ಟಿಕಲ್‌ 370 ಇತ್ಯಾದಿ ವಿಚಾರದಲ್ಲಿ ಎದುರಾದ ಪ್ರತಿರೋಧಗಳನ್ನು ನೋಡಿ ನಮ್ಮ ನಿರ್ಣಯ ಗಟ್ಟಿಯಾಗಿದೆ. ಏನೇ ಆದರೂ, ನಾವು ಈ ದೇಶದಲ್ಲಿನ ಹುಸಿ ಜಾತ್ಯತೀತವಾದವನ್ನು ಬೆಂಬಲಿಸುವುದಿಲ್ಲ. ಈ ಮೇಲಿನ ಅಂಶಗಳೆಲ್ಲ(ಸಿಎಎ, ಎನ್‌ಆರ್‌ಸಿ, ಆರ್ಟಿಕಲ್‌ 370) ನಮ್ಮ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳಾಗಿವೆ. ಹೀಗಾಗಿ, “”ಇಡೀ ದೇಶವೇ ಸಿಎಎ, ಎನ್‌ಆರ್‌ಸಿ ಇತ್ಯಾದಿಗಳನ್ನು ವಿರೋಧಿಸುತ್ತಿದೆ ಮತ್ತು ಕೇಂದ್ರ ಸರಕಾರ ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಹೆದರಿದೆ” ಎಂಬ ಹುಸಿ ಜಾತ್ಯತೀತವಾದಿಗಳ ಕಟ್ಟುಕಥೆಯನ್ನು ನಂಬಲು ಯಾರೂ ಸಿದ್ಧರಿಲ್ಲ.
ಯಾರು “ಅಸಹಿಷ್ಣು ಭಾರತ’ ಎಂಬ ಆಂದೋಲನ ಆರಂಭಿಸಿದರೋ, ಯಾರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದರೋ ಮತ್ತು ಯಾರು ತುಕೆx ತುಕೆx ಗ್ಯಾಂಗ್‌ಗಳ ಪರವಾಗಿ ನಿಂತರೋ ಅವರನ್ನು ಇಂದು ಭಾರತ ಪ್ರಶ್ನಿಸಲಾರಂಭಿಸಿದೆ.
ಶಾಬಾನೋ ನ್ಯಾಯದಿಂದ ವಂಚಿತಳಾದಾಗ ಇವರೆಲ್ಲ ಎಲ್ಲಿದ್ದರಂತೆ? ರೈಲೊಂದರಲ್ಲಿ 54 ಜನರನ್ನು ಸುಟ್ಟು ಕೊಂದಾಗ ಇವರೆಲ್ಲ ಏಕೆ ಮಾತನಾಡಲಿಲ್ಲ?

ಬೋಗಿಯೊಳಗಿಂದಲೇ ಬೆಂಕಿ ಹತ್ತಿಕೊಂಡಿತು ಎಂಬ ಸುಳ್ಳು ಕತೆಯನ್ನೇಕೆ ಇವರೆಲ್ಲ ಕಟ್ಟಿದರು? ಕಾಶ್ಮೀರದಿಂದ ಪಂಡಿತರನ್ನೆಲ್ಲ ಹೊರದೂಡಿದಾಗ ಏಕೆ ಇವರೆಲ್ಲ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿ ಕಾಶ್ಮೀರಿ ಮುಸಲ್ಮಾನರನ್ನು ಅಸಹಿಷ್ಣುಗಳು ಎಂದು ಕರೆಯಲಿಲ್ಲ? ಗಂಡಸರು ತ್ರಿವಳಿ ತಲಾಖ್‌ ನಿಯಮವನ್ನು ದುರ್ಬಳಕೆ ಮಾಡಿಕೊಳ್ಳುವಾಗ ಏಕೆ ಇವರೆಲ್ಲ ಆ ಸಮುದಾಯದ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಲಿಲ್ಲ? ಪಾಕಿಸ್ಥಾನದಲ್ಲಿ ಹೆಣ್ಣುಮಕ್ಕಳನ್ನು ಅಪಹರಿಸಿ(ವರ್ಷಕ್ಕೆ ಅಜಮಾಸು 1000) ಪ್ರತಿವರ್ಷ ಬಲವಂತವಾಗಿ ಮತಾಂತರ ಮಾಡಲಾಗುತ್ತದೆಯಲ್ಲ, ಆ ಬಗ್ಗೆ ಏಕೆ ಇವರು ಮಾತನಾಡುವುದಿಲ್ಲ?

ಏಕೆ ಈ ಗ್ಯಾಂಗ್‌ ತಮಗೆ ಬೇಕಾದ ವಿಚಾರದಲ್ಲಷ್ಟೇ ಬಾಯೆ¤ರೆಯುತ್ತದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇವರೆಲ್ಲ, “ಭಾರತ ಅಸಹಿಷ್ಣುವಾಗುತ್ತಿದೆ’ ಎಂದೆನ್ನುತ್ತಾ ತಮ್ಮ ಅವಾರ್ಡ್‌ಗಳನ್ನು ಹಿಂದಿರುಗಿಸಲಾರಂಭಿಸಿದರು. ಈ ಗ್ಯಾಂಗ್‌ನ ಇಬ್ಬಗೆ ಗುಣ, ನಕಲಿತನ ಈಗ ಬೆತ್ತಲಾಗಿದೆ. ಈಗ ಈ ಗ್ಯಾಂಗ್‌ನವರು ಪ್ರಪಂಚದ ಯಾವುದೇ ಭಾಗಕ್ಕಾದರೂ ಹೋಗಲಿ, ತಮ್ಮ ಲೇಖನಗಳನ್ನು ಅಂತಾರಾಷ್ಟ್ರೀಯ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಿಸಲಿ, ವಿದೇಶಗಳಲ್ಲಿ ಎಷ್ಟು ಬೇಕಾದರೂ ಸೆಮಿನಾರುಗಳನ್ನು-ಧರಣಿಗಳನ್ನು ನಡೆಸಲಿ, ತಮ್ಮ ಸಂಪರ್ಕಗಳನ್ನು ಎಷ್ಟಾದರೂ ಬಳಸಿಕೊಳ್ಳಲಿ. ಇದರಿಂದ ಏನೂ ಆಗದು.
ಭಾರತದಲ್ಲಿ ಯಾರೂ ಕೂಡ ಜೆಎನ್‌ಯು, ಜಾಮಿಯಾ ಮತ್ತು ಎಎಂಯುಗಳ ಪ್ರತಿಭಟನೆಗಳಿಗೆ ಹೆದರುವುದಿಲ್ಲ. ಮೌನ ಮೆಜಾರಿಟಿ ಮನೆಯಲ್ಲಿ ಕುಳಿತು ಮೋದಿ ಅವರ ಮೇಲೆ ಭದ್ರ ನಂಬಿಕೆ ಇಟ್ಟುಕೊಂಡಿದೆ. ಜೆಎನ್‌ಯು/ಎಎಂಯು/ಜಾಮಿಯಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಕೆಲವು ನಟರನ್ನು ಕರೆಸಿಕೊಂಡು ಎಷ್ಟೇ ವ್ಯವಸ್ಥಿತ ಪ್ರತಿಭಟನೆಗಳನ್ನು ನಡೆಸಿದರೂ, ಸೈಲೆಂಟ್‌ ಮೆಜಾರಿಟಿಯ ನಿಲುವು ಬದಲಾಗುವುದಿಲ್ಲ.
ಜನರಲ್ಲಿನ ಈ ಬದಲಾವಣೆಗೆ ಮೋದಿಯವರಿಗಿಂತಲೂ, ಈ ಗ್ಯಾಂಗ್‌ ಪ್ರಮುಖ ಕಾರಣ. ಸೈಲೆಂಟ್‌ ಮೆಜಾರಿಟಿಯು ಚುನಾವಣೆಗಳಲ್ಲಿ ತನ್ನ ಶಕ್ತಿಯನ್ನು ಸಾಬೀತುಪಡಿಸಿದ್ದು, ಈ ಗ್ಯಾಂಗ್‌ ತನ್ನ ಗುಣವನ್ನು ಬದಲಿಸಿಕೊಳ್ಳದೇ ಹೋದರೆ, ಮತದಾರರು ಮತ್ತೂಮ್ಮೆ ತಮ್ಮ ಶಕ್ತಿಯನ್ನು ಸಾಬೀತುಪಡಿಸುತ್ತಾರೆ.

ಇರುವುದನ್ನು ಇರುವಂತೆಯೇ ಹೇಳುವುದಕ್ಕೆ, ನಿಜವಾದ ಜಾತ್ಯತೀತತೆಯನ್ನು ಅಪ್ಪಿಕೊಳ್ಳುವುದಕ್ಕೆ ಇದು ಸರಿಯಾದ ಸಮಯ. ಲಿಂಚಿಂಗ್‌ ಪ್ರಕರಣಗಳು(ಥಳಿಸಿ ಸಾಯಿಸುವುದು) ಎಷ್ಟು ತಪ್ಪೋ, ಸಿಎಎ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳೂ ಅಷ್ಟೇ ತಪ್ಪು. ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿಯವರೆಗೆ ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸುವುದು ತಪ್ಪು ಎನ್ನುವುದಾದರೆ, ಆರ್ಟಿಕಲ್‌ 370 ತೆರವನ್ನು ವಿರೋಧಿಸುವ ಜಿಹಾದಿಗಳಿಗೆ, ಮೂಲಭೂತವಾದಿಗಳನ್ನು ಬೆಂಬಲಿಸುವುದೂ ತಪ್ಪು. ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ನಿರಾಕರಿಸುವುದು ತಪ್ಪು ಎನ್ನುವುದಾದರೆ, ಲಡಾಖ್‌-ಜಮ್ಮು/ ಉದ್ಧಂಪುರದ ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ಹತ್ತಿಕ್ಕುವುದೂ ಅಷ್ಟೇ ತಪ್ಪು. ಮಾನವ ಹಕ್ಕು ಕಾಶ್ಮೀರಿ ಪಂಡಿತರಿಗೂ ಹಾಗೂ 1947ರಲ್ಲಿ ಹಿಂದು ಉಳಿದುಬಿಟ್ಟ ಜನರಿಗೂ ಅನ್ವಯವಾಗುತ್ತದೆ ಎನ್ನುವುದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕಿದೆ.

ಈ ಹುಸಿ ಜಾತ್ಯತೀತವಾದಿಗಳು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಲಿ- ಭಾರತ ಈಗ ಶಾಶ್ವತವಾಗಿ ಬದಲಾಗಿಬಿಟ್ಟಿದೆ. ದೇಶದ ಏಕತೆ ಮತ್ತು ಸಮಗ್ರತೆ ಅಪಾಯದಲ್ಲಿದೆ ಎಂದು ದಾರಿತಪ್ಪಿಸಲು ಹೋದರೆ, ಅದನ್ನೀಗ ಭಾರತೀಯರು ಖಂಡಿತ ನಂಬುವುದಿಲ್ಲ.
(ಲೇಖನ ಮೂಲ: ಟಿಒಐ)

ಕರ್ನಲ್‌(ನಿವೃತ್ತ) ಭಟ್ನಾಗರ್‌

Advertisement

Udayavani is now on Telegram. Click here to join our channel and stay updated with the latest news.

Next