Advertisement

ಚೀನಾದಿಂದ ಬಂತು 5 ಲಕ್ಷ ಪರೀಕ್ಷಾ ಕಿಟ್

12:40 AM Apr 18, 2020 | Hari Prasad |

ನವದಹಲಿ: ಭಾರತವು 5 ಲಕ್ಷ ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಚೀನದಿಂದ ಸ್ವೀಕರಿಸಿದೆ ಎಂದು ಐಸಿಎಂಆರ್‌ ಹೇಳಿದೆ.

Advertisement

ಅವುಗಳನ್ನು ಕೇವಲ ನಿಗಾ ವಹಿಸಲು ಮತ್ತು ದೇಶದಲ್ಲಿ ಕೋವಿಡ್ ಹಾಟ್‌ ಸ್ಪಾಟ್‌ ಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ, ಕಡಿಮೆಯಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಮಾತ್ರವೇ ಬಳಸಲಾಗುತ್ತದೆ ಎಂದಿ‍ದ್ದಾರೆ.

ಭಾರತದಲ್ಲಿ ದಿನಕ್ಕೆ 30,043 ಸ್ಯಾಂಪಲ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈವರೆಗೆ ಖಾಸಗಿ ಹಾಗೂ ಸರಕಾರಿ ಪ್ರಯೋಗಾಲಯಗಳು ಒಟ್ಟಾರೆ 2.90 ಲಕ್ಷ ಪರೀಕ್ಷೆಗಳನ್ನು ನಡೆಸಿವೆ ಎಂದು ಹೇಳಿದ್ದಾರೆ. ಜತೆಗೆ, ಭಾರತವು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಯೇ ಸ್ಯಾಂಪಲ್‌ ಗಳ ಪರೀಕ್ಷೆ ನಡೆಸುತ್ತಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next