Advertisement

Report; ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 105ನೇ ಸ್ಥಾನ

01:39 AM Oct 13, 2024 | Team Udayavani |

ಲಂಡನ್‌: ಬೇರೆ ಬೇರೆ ದೇಶಗಳು ಎದು ರಿಸುತ್ತಿರುವ ಹಸಿವಿನ ಪ್ರಮಾಣವನ್ನು ಅಳೆಯಲು ವಿವಿಧ ಸಂಸ್ಥೆಗಳು ಬಳಸುತ್ತಿರುವ ಜಾಗತಿಕ ಹಸಿವು ಸೂಚ್ಯಂಕ(GHI) ದಲ್ಲಿ ಭಾರತಕ್ಕೆ 105ನೇ ಸ್ಥಾನ ದೊರೆತಿದೆ.

Advertisement

2024ನೇ ಸಾಲಿನ ವರದಿ ಯನ್ನು ಐರ್ಲೆಂಡ್‌ನ‌ ಕನ್ಸರ್ನ್ ವರ್ಲ್ಡ್ ವೈಡ್‌ ಮತ್ತು ಜರ್ಮನಿಯ ವೆಲ್‌§ಹಂಗರ್‌ಹಿಲ್ಫ್ ಸಂಸ್ಥೆಗಳು ಪ್ರಕಟಿಸಿದ್ದು, ಸಮಸ್ಯೆ ಬಗೆಹರಿ ಸಲು ಪ್ರಯತ್ನಗಳು ನಡೆಯ ದಿದ್ದಲ್ಲಿ ಬಡರಾಷ್ಟ್ರಗಳಲ್ಲಿ ಈ ಸಮಸ್ಯೆ ದಶಕಗಳ ಕಾಲ ಜೀವಂತವಾಗಿರುತ್ತದೆ ಎಂದಿವೆ. ವರದಿಯಂತೆ ಜಾಗತಿಕವಾಗಿ 73 ಕೋಟಿ ಜನ ಪ್ರತಿನಿತ್ಯ ಹಸಿವಿನಿಂದ ಬಳಲುತ್ತಿದ್ದಾರೆ.

4 ಅಂಶಗಳನ್ನು ಅನುಸರಿಸಿ ಈ ವರದಿ ತಯಾರಿಸಲಾಗಿದ್ದು, ಭಾರತ “ಗಂಭೀರ ಹಸಿವಿನ ವರ್ಗ’ದಲ್ಲಿದೆ. ಇಲ್ಲಿನ 13.7 ಪ್ರತಿಶತ ಮಕ್ಕಳು ಅಪೌಷ್ಟಿಕತೆಯಿಂದ, 35.5 ಕುಂಠಿತ ಬೆಳವಣಿಗೆಯಿಂದ, 18.7 ಪ್ರತಿಶತ ಕೃಶ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಭಾರತ ಈ ಪಟ್ಟಿಯಲ್ಲಿ 111ನೇ ಸ್ಥಾನ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next