Advertisement

ರಕ್ಷಣಾ ಉತ್ಪನ್ನಗಳ ರಫ್ತು ಉತ್ತೇಜನಕ್ಕೆ ಭಾರತ ಸನ್ನದ್ಧ

12:52 AM Aug 18, 2020 | mahesh |

ಹೊಸದಿಲ್ಲಿ: ರಕ್ಷಣಾ ಕ್ಷೇತ್ರದಲ್ಲೂ ಭಾರತ ವೇಗವಾಗಿ ಸ್ವಾವಲಂಬಿ ಹೆಜ್ಜೆ ಇಟ್ಟಿದೆ. ರಾಜತಾಂತ್ರಿಕ ಮಾರ್ಗದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ಮೂಲಕ ದೇಶೀ ಉದ್ಯಮವನ್ನು ಉತ್ತೇಜಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

Advertisement

ದೇಶೀ ಉದ್ಯಮ ಸಂಸ್ಥೆಗಳನ್ನು ಉದ್ದೇಶಿಸಿ ವೆಬಿನಾರ್‌ನಲ್ಲಿ ಮಾತನಾಡಿದ ರಕ್ಷಣಾ ಇಲಾಖೆಯ ಉತ್ಪಾದನಾ ವಿಭಾಗದ ಕಾರ್ಯದರ್ಶಿ ರಾಜ್‌ಕುಮಾರ್‌, “ಮಿತ್ರ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ವೆಬ್‌ ಸಂವಹನ ನಡೆಸಿ, ಅವರ ರಕ್ಷಣಾ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತಿದೆ. ರಾಯಭಾರಿ ಕಚೇರಿಗಳ ನೆರವಿನೊಂದಿಗೆ ಮಿತ್ರ ರಾಷ್ಟ್ರಗಳಿಗೆ ಅಗತ್ಯವಿರುವ ರಕ್ಷಣಾ ಉತ್ಪನ್ನಗಳು, ಶಸ್ತ್ರಾಸ್ತ್ರಗಳ ಪಟ್ಟಿಯನ್ನು ತಯಾರಿಸುತ್ತಿದ್ದೇವೆ. ರಕ್ಷಣಾ ಉತ್ಪನ್ನಗಳ ನಿರ್ಮಾಣಕ್ಕೆ ಹೂಡಿಕೆ ಮಾಡಲು ಸಂಸ್ಥೆಗಳು ಮುಂದೆ ಬರಬೇಕು’ ಎಂದು ಕರೆ ನೀಡಿದರು.

ಮತ್ತಷ್ಟು ನಿಷೇಧ?: ಆಮದು ಮಾಡಿಕೊಳ್ಳುತ್ತಿದ್ದ 101 ಶಸ್ತ್ರಾಸ್ತ್ರಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಲಘು ಯುದ್ಧ ಹೆಲಿಕಾಪ್ಟರ್‌ಗಳು, ಸಾಂಪ್ರ ದಾಯಿಕ ಜಲಾಂತರ್ಗಾಮಿ ನೌಕೆಗಳು ಮತ್ತು ಕ್ರೂಸ್‌ ಕ್ಷಿಪಣಿಗಳನ್ನೊಳೊಂಡ ಮತ್ತಷ್ಟು ರಕ್ಷಣಾ ಉತ್ಪನ್ನಗಳ ಆಮದು ನಿಷೇಧದ 2ನೇ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next