ಬೆಂಗಳೂರು: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯ ಮಾರ್ಚ್ 12ರಂದು ಆರಂಭವಾಗಲಿದೆ. ಹೊನಲು ಬೆಳಕಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ.
ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ ಮತ್ತೊಂದು ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಳ್ಳುವ ಸಿದ್ದತೆಯಲ್ಲಿದೆ. ಮತ್ತೊಂದೆಡೆ ಶ್ರೀಲಂಕಾ ತಂಡವು ಪ್ರವಾಸದಲ್ಲಿ ಮೊದಲ ಜಯ ಕಾಣುವ ಹಂಬಲದಲ್ಲಿದೆ.
ಭಾರತ ತಂಡವು ತನ್ನ ನಾಲ್ಕನೇ ಪಿಂಕ್ ಬಾಲ್ ಪಂದ್ಯವಾಡಲಿದೆ. ಈ ಮೊದಲು ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಪಿಂಕ್ ಬಾಲ್ ಪಂದ್ಯವಾಡಿದೆ. ಬಾಂಗ್ಲಾ ಮತ್ತು ಇಂಗ್ಲೆಂಡ್ ವಿರುದ್ಧ ಗೆದ್ದಿದ್ದರೆ, ಆಸೀಸ್ ವಿರುದ್ಧ ಸೋಲನುಭವಿಸಿತ್ತು.
ಇದನ್ನೂ ಓದಿ:ಐಪಿಎಲ್ 2022: ರಾಜಸ್ಥಾನ ರಾಯಲ್ಸ್ ಪಾಳಯ ಸೇರಿದ ಲಸಿತ್ ಮಾಲಿಂಗ
ಬೆಂಗಳೂರು ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ತಂಡಕ್ಕೆ ಮರಳಿರುವ ಅಕ್ಷರ್ ಪಟೇಲ್ ಅವರು ಆಡುವ ಸಾಧ್ಯತೆ ಹೆಚ್ಚಿದ್ದು, ಜಯಂತ್ ಯಾದವ್ ಅವರಿಗೆ ಸ್ಥಾನ ಬಿಟ್ಟುಕೊಡಬೇಕಾದೀತು.
ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ