ಹೊಸದಿಲ್ಲಿ : 2017-18ರ ಜನವರಿ – ಮಾರ್ಚ್ ತ್ತೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.7ರ ಬೆಳವಣಿಗೆಯನ್ನು ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ.6.1 ಇತ್ತು. ನೋಟು ಅಮಾನ್ಯದ ಬಳಿಕದಲ್ಲಿ ದಾಖಲಾಗಿರುವ ಗರಿಷ್ಠ ಜಿಡಿಪಿ (ಶೇ.7.7) ಇದಾಗಿರುವುದು ಗಮನಾರ್ಹವಾಗಿದೆ.
2017-18ರ ಜನವರಿ – ಮಾರ್ಚ್ ತ್ತೈಮಾಸಿಕದಲ್ಲಿ ಶೇ.7.7 ಜಿಡಿಪಿ ದಾಖಲಾಗಲು ಉತ್ಪಾದನಾ ರಂಗದಲ್ಲಿ ಮತ್ತು ಗ್ರಾಹಕರು ಕೈಗೊಳ್ಳುವ ಖರ್ಚಿನಲ್ಲಿ ಆಗಿರುವ ಉತ್ತಮ ಬೆಳವಣಿಗೆಯೇ ಮುಖ್ಯ ಕಾರಣ ಎಂಬುದನ್ನು ಕೇಂದ್ರ ಅಂಕಿ-ಅಂಶ ಮಾಹಿತಿಗಳು ತೋರಿಸಿವೆ.
2017-18ರ ಸಂಪೂರ್ಣ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ.6.7ರಲ್ಲಿ ದಾಖಲಾಗಿದೆ. 2016-17ರ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ ಜಿಡಿಪಿ ಶೇ.7.1 ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದು ರೂಪಾಯಿ ದೌರ್ಬಲ್ಯಕ್ಕೆ ಕಾರಣವಾಗಿದ್ದು ಇದರಿಂದ ದೇಶದ ಆಮದು ತೀವ್ರ ಒತ್ತಡಕ್ಕೆ ಗುರಿಯಾಗಿದೆ.
Related Articles
ನೋಟು ಅಮಾನ್ಯ ಮತ್ತು ಜಿಎಸ್‌ಟಿ ಅನುಷ್ಠಾನದ ಬಳಿಕದಲ್ಲಿ ದೇಶದ ಜಿಡಿಪಿ 2017-18ರ ಜನವರಿ – ಮಾರ್ಚ್ ತ್ತೈಮಾಸಿಕದಲ್ಲಿ ಶೇ.7.7 ದಾಖಲಾಗಿರುವುದು ಗರಿಷ್ಠವೆನಿಸಿದೆ.
ಕಲ್ಲಿದ್ದಲು, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು ಮತ್ತು ಸಿಮೆಂಟ್ ರಂಗ ಶೇ.16ರ ಬೆಳವಣಿಗೆಯನ್ನು ಕಂಡಿವೆ. ಈ ವರ್ಷ ಎಪ್ರಿಲ್‌ನಲ್ಲಿ ಇವು ಅನುಕ್ರಮವಾಗಿ ಶೇ.7.4, ಶೇ.2.7, ಮತ್ತು ಶೇ.16.6ರ ಬೆಳವಣಿಗೆಯನ್ನು ದಾಖಲಿಸಿವೆ. ರಸಗೊಬ್ಬರ ಉತ್ಪಾದನೆ ಶೇ. 4.6 ಮತ್ತು ಉಕ್ಕು ಉತ್ಪಾದನೆ ರಂಗ ಶೇ. 3.5ರ ಬೆಳವಣಿಗೆಯನ್ನು ಎಪ್ರಿಲ್‌ನಲ್ಲಿ ವಾರ್ಷಿಕ ನೆಲೆಯಲ್ಲಿ ದಾಖಲಿಸಿವೆ.
2017ರ ಎಪ್ರಿಲ್ ಗೆ ಹೋಲಿಸಿದರೆ ಈ ವರ್ಷ ಎಪ್ರಿಲ್‌ನಲ್ಲಿ ವಿದ್ಯುತ್ ಉತ್ಪಾದನೆ ಶೇ. 2.2ರಷ್ಟು ಹೆಚ್ಚಿದೆ.