Advertisement

ಏಪ್ರಿಲ್‌ನಿಂದ ಪೋಸ್ಟ್‌ ಬ್ಯಾಂಕ್‌ 

08:15 AM Feb 11, 2018 | Team Udayavani |

ಹೊಸದಿಲ್ಲಿ: ಭಾರತೀಯ ಅಂಚೆ ಇಲಾಖೆ ಏಪ್ರಿಲ್‌ನಿಂದ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಲಿದೆ. ದೇಶಾದ್ಯಂತ ಈ ಸೇವೆ ಆರಂಭವಾಗಲಿದ್ದು, ಈ ದಿನಾಂಕ ನಿಗದಿಯಲ್ಲಿ ಯಾವುದೇ ವಿಳಂಬವಿಲ್ಲ ಎಂದು ಸರಕಾರ ಹೇಳಿದೆ. 1.55 ಲಕ್ಷ ಅಂಚೆ ಕಚೇರಿಗಳಲ್ಲಿ ಡಿಜಿಟಲ್‌ ಪಾವತಿ ಸ್ವೀಕಾರ ಮಾಡಲಾಗುತ್ತದೆ. 650 ಪೇಮೆಂಟ್‌ ಬ್ಯಾಂಕ್‌ ಶಾಖೆಗಳು ಈ ಅಂಚೆ ಕಚೇರಿಗಳಿಗೆ ನೆರವು ಒದಗಿಸಲಿವೆ. ಈಗಾಗಲೇ ಅಂಚೆ ಕಚೇರಿಯಲ್ಲಿರುವ 17 ಕೋಟಿ ಖಾತೆಗಳನ್ನು ಇನ್ನು ಸಾಮಾನ್ಯ ಬ್ಯಾಂಕ್‌ನಲ್ಲಿರುವ ವಿಧಾನಗಳಂತೆಯೇ ನಿರ್ವಹಿಸಬಹುದಾಗಿದೆ. ಅಲ್ಲದೆ ಇತರ ಬ್ಯಾಂಕ್‌ಗಳಿಗೂ ಅಂಚೆ ಕಚೇರಿಯಿಂದ ಹಣ ವರ್ಗಾವಣೆ ಮಾಡಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next