ಹೊಸದಿಲ್ಲಿ: ಭಾರತದೆಲ್ಲೆಡೆ ಕಾರ್ಯನಿರ್ವಹಿಸುವ ಭಾರತೀಯ ಅಂಚೆ ಕಚೇರಿಯ ಪೋಸ್ಟ್‌ಬ್ಯಾಂಕ್‌ಗಳ ಗ್ರಾಹಕರು ತಮ್ಮ ಖಾತೆಗೆ ಸಂಬಂಧಿಸಿದ ವ್ಯವಹಾರಗಳನ್ನು ವಾಟ್ಸ್‌ಆ್ಯಪ್ ಮೂಲಕ ನಡೆಸುವಂಥ ಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
Advertisement
ಇದಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ವಾಟ್ಸ್‌ಆ್ಯಪ್ ಸಂಸ್ಥೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಐಬಿಪಿಎಸ್‌ನಲ್ಲಿ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್) ನೀವು ಖಾತೆ ಹೊಂದಿದ್ದರೆ, ವಾಟ್ಸ್‌ಆ್ಯಪ್ ಬಳಸಿಕೊಂಡು ಹಣ ಕಳುಹಿಸಬಹುದಾಗಿದೆ.
ಇದರ ಜತೆಗೆ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳಬಹುದು. ಹೊಸ ಖಾತೆ ತೆರೆಯಲು ಮನವಿಯನ್ನೂ ಮಾಡಬಹುದಾಗಿದೆ.