Advertisement

ವಿದ್ಯುತ್‌ ಕ್ಷೇತ್ರ ಚೀನ ಮುಕ್ತ?

10:25 AM Jun 25, 2020 | mahesh |

ಹೊಸದಿಲ್ಲಿ: ದೇಶದಾದ್ಯಂತ ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ಕೇಳುತ್ತಿರುವ ಹಿನ್ನೆಲೆಯಲ್ಲೇ ಕೇಂದ್ರ ಸರಕಾರ ವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಿ ಚೀನ ಉತ್ಪನ್ನ ಬಳಕೆಗೆ ಕಡಿವಾಣ ಹಾಕುವಂಥ ಮಹತ್ತರ ಕ್ರಮಗಳಿಗೆ ಮುಂದಾಗಿದೆ. ವಿದ್ಯುತ್‌ ಪ್ರಸರಣ ಕ್ಷೇತ್ರದಲ್ಲಿ ಬಳಸಲ್ಪಡುವ, ಟವರ್‌ಗಳು, ಕೈಗಾರಿಕಾ ಉತ್ಪನ್ನಗಳು, ಕೆಪಾಸಿಟರ್‌ಗಳು, ಕಂಡಕ್ಟರ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು, ಕೇಬಲ್‌ಗ‌ಳು, ಇನ್ಸುಲೇಟರ್‌ಗಳು ನಮ್ಮ ದೇಶದಲ್ಲೇ ಉತ್ಪಾದನೆಯಾಗುತ್ತಿದ್ದರೂ, ಅವನ್ನು ವಿನಾಕಾರಣ ಅನ್ಯ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಮಹತ್ವದ ಅಂಶವನ್ನು ವಾಣಿಜ್ಯ ಇಂಟಲಿಜೆನ್ಸ್‌ ಆ್ಯಂಡ್‌ ಸ್ಟಾಟಿಸ್ಟಿಕ್ಸ್‌ ವಿಭಾಗ ತಿಳಿಸಿದೆ. ಈ ಹಿನ್ನೆಲೆ ಯಲ್ಲಿ, ಈ ಮೂಲ ಪರಿಕರಗಳನ್ನು ನಮ್ಮಲ್ಲೇ ಅಗತ್ಯ ಪ್ರಮಾಣದಲ್ಲಿ ಉತ್ಪಾದಿಸಲು ಆಲೋಚಿಸಲಾಗಿದೆ ಎಂದು ಸಿಂಗ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next