ದುಬಾೖ: ಬಹು ನಿರೀಕ್ಷೆಯ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಉಳಿದಿರುವುದು ಇನ್ನು ಕೆಲವು ದಿನಗಳು ಮಾತ್ರ. ಭಾರತ-ಪಾಕಿಸ್ಥಾನ ನಡುವಿನ ಆ. 28ರ ಹೈ ವೋಲ್ಟೇಜ್ ಮುಖಾಮುಖಿ ಈ ಕೂಟದ ಪ್ರಮುಖ ಆಕರ್ಷಣೆ.
ಎರಡೂ ಕಡೆಯ ವೀಕ್ಷಕರು ಈ ಪಂದ್ಯದ ರೋಮಾಂಚನವನ್ನು ಸವಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಇವರೆಲ್ಲರ ಪಾಲಿಗೊಂದು ಸಿಹಿ ಸುದ್ದಿ ಲಭಿಸಿದೆ.
ಈ ಕೂಟದ ಟಿಕೆಟ್ ಮಾರಾಟ ಆ. 15ರಿಂದ ಆರಂಭವಾಗಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ತಿಳಿಸಿದೆ.
ಇದನ್ನೂ ಓದಿ:ಸಚಿನ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿ ಇಂದಿಗೆ 32 ವರ್ಷ
ಕೂಟದ ಮೊದಲ ಪಂದ್ಯ ಶ್ರೀಲಂಕಾ-ಅಫ್ಘಾನಿಸ್ಥಾನ ನಡುವೆ ಆ. 27ರಂದು ನಡೆಯಲಿದೆ. ಮರುದಿನವೇ ದುಬಾೖಯಲ್ಲಿ ಭಾರತ-ಪಾಕಿಸ್ಥಾನ ತಂಡಗಳು ಕಣಕ್ಕಿಳಿಯಲಿವೆ.
ಮೊದಲು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಗೆ ಅವಕಾಶ ಲಭಿಸಲಿದೆ. ಬಳಿಕ ಕೌಂಟರ್ ಸೇಲ್ ನಡೆಯಲಿದೆ ಎಂದು ಎಸಿಸಿ ತಿಳಿಸಿದೆ.