Advertisement
ಮೂಲ ವೇಳಾಪಟ್ಟಿ ಪ್ರಕಾರ ಈ ಪಂದ್ಯಾವಳಿ ಸೆ. 14 ಮತ್ತು 15ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಎರಡೂ ದೇಶಗಳ ರಾಜಕೀಯ ಬಿಕ್ಕಟ್ಟು ಹಾಗೂ ಭದ್ರತಾ ಸಮಸ್ಯೆಯಿಂದಾಗಿ ಭಾರತ ಪಾಕಿಸ್ಥಾನದಲ್ಲಿ ಆಡಲು ನಿರಾಕರಿಸಿತ್ತು. ಕೂಟವನ್ನು ಮುಂದೂಡುವಂತೆ ಹಾಗೂ ಇಲ್ಲಿಂದ ಸ್ಥಳಾಂತರಿಸು ವಂತೆಯೂ ಮನವಿ ಸಲ್ಲಿಸಿತ್ತು.
ಶುಕ್ರವಾರ ಮಾಧ್ಯಮ ಪ್ರಕಟನೆ ಯೊಂದನ್ನು ಬಿಡುಗಡೆ ಮಾಡಿದ ಎಐಟಿಎ, ನ. 29-30 ಅಥವಾ ನ. 30-ಡಿ. 1ರಂದು ಈ ಪಂದ್ಯಾವಳಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಆದರೆ ಇದಕ್ಕೆ ಭದ್ರತಾ ಖಾತರಿ ಮುಖ್ಯ. ಇದಕ್ಕಾಗಿ ನ. 4ರಂದು ಇನ್ನೂ ಒಂದು ಸುತ್ತಿನ ಭದ್ರತಾ ಪರಿಶೀಲನೆ ನಡೆಸಬೇಕಾಗಿದ್ದು, ಇದರ ವರದಿಯ ಆಧಾರದಲ್ಲಿ ಈ ಕೂಟವನ್ನು ಫೈಸಾಲಾಬಾದ್‌ನಲ್ಲಿ ನಡೆಸಬೇಕೋ ಅಥವಾ ಸ್ಥಳಾಂತರಿಸಬೇಕೋ ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಎಐಟಿಎ ತಿಳಿಸಿದೆ.