Advertisement
ಪಾಕಿಸ್ಥಾನ ಎದುರಿನ ಲೀಗ್ ಮುಖಾಮುಖಿಯ ವೇಳೆ ಭಾರತಕ್ಕೆ ಮಾತ್ರ ಬ್ಯಾಟಿಂಗ್ ಸಾಧ್ಯವಾಗಿತ್ತು. ಅಗ್ರ ಕ್ರಮಾಂಕದಲ್ಲಿ ಕುಸಿತ ಅನುಭವಿಸಿದಾಗ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಸೇರಿಕೊಂಡು ಮೊತ್ತವನ್ನು 266ರ ತನಕ ಏರಿಸುವಲ್ಲಿ ಯಶಸ್ವಿಯಾಗಿ ದ್ದರು. ಇಬ್ಬರೂ 80ರ ಗಡಿ ದಾಟಿದ್ದರು. ಆದರೀಗ ಆಪತಾºಂಧವನ ಪಾತ್ರ ನಿರ್ವಹಿಸಿದ ಇಶಾನ್ ಕಿಶನ್ ಸ್ಥಾನಕ್ಕೇ ಸಂಚಕಾರ ಬರುವ ಸಾಧ್ಯತೆ ಇದೆ. ಕಾರಣ, ಕೆ.ಎಲ್. ರಾಹುಲ್ ಅವರ ಪುನರಾಗಮನ. ರಾಹುಲ್ ಪ್ರಧಾನ ಕೀಪರ್ ಆಗಿರುವ ಕಾರಣ, ಇಶಾನ್ ಅವರನ್ನು ಆಡಿಸಲು ಸಾಧ್ಯವಾಗದು. ಇಬ್ಬರನ್ನೂ ಆಡಿಸುವುದಾದರೆ ಬೇರೊಬ್ಬ ಆಟಗಾರನನ್ನು ಹೊರಗಿರಿಸಬೇಕಾ ಗುತ್ತದೆ. ಹೀಗಾಗಿ ಆಯ್ಕೆ ಪ್ರಕ್ರಿಯೆ ಜಟಿಲಗೊಳ್ಳಲಿದೆ. ಇದನ್ನೊಂದು “ಹ್ಯಾಪ್ಪಿ ಹೆಡ್‌ಏಕ್’ ಎಂದು ಬಣ್ಣಿಸಲಾಗುತ್ತಿದೆ.
ಇಶಾನ್ ಕಿಶನ್ ಕೇವಲ ಪಾಕಿಸ್ಥಾನ ವಿರುದ್ಧ ಮಾತ್ರವಲ್ಲ, ಇದಕ್ಕೂ ಹಿಂದಿನ ವೆಸ್ಟ್ ಇಂಡೀಸ್ ಪ್ರವಾಸದ ಮೂರೂ ಏಕದಿನಗಳಲ್ಲಿ ಅರ್ಧ ಶತಕ ಬಾರಿಸಿ ಪ್ರಚಂಡ ಫಾರ್ಮ್ ತೋರ್ಪಡಿಸಿದ್ದಾರೆ. ಹೀಗೆ ಕಳೆದ 4 ಏಕದಿನಗಳಲ್ಲಿ 4 ಅರ್ಧ ಶತಕ ಬಾರಿಸಿದ ಸಾಹಸ ಇವರದು. ಒಂದರಿಂದ 5ನೇ ಕ್ರಮಾಂಕದ ತನಕ ಎಲ್ಲಿಯೂ ಸಲ್ಲುವ ಆಟಗಾರನೆಂಬುದು ಇಶಾನ್ ಕಿಶನ್ ಪಾಲಿನ ಮತ್ತೂಂದು ಹೆಗ್ಗಳಿಕೆ. ಜತೆಗೆ ಲೆಫ್ಟ್ ಹ್ಯಾಂಡರ್. ಹೀಗಾಗಿ ಬ್ಯಾಟಿಂಗ್ ಸರದಿಗೊಂದು ವೆರೈಟಿ ಲಭಿಸುತ್ತದೆ. ಆರಂಭಿಕನೂ ಆಗಿರುವ ರಾಹುಲ್ ಸದ್ಯ 5ನೇ ಕ್ರಮಾಂಕದಲ್ಲಿ ಆಡಬೇಕಾಗು ತ್ತದೆ. ಮಾರ್ಚ್‌ನಿಂದ ಏಕದಿನ ಪಂದ್ಯ ಆಡಿಲ್ಲ. ಆದರೆ ವಿಶ್ವಕಪ್ ಹಿನ್ನೆಲೆಯಲ್ಲಿ ಇವರ ಫಾರ್ಮ್ ಹಾಗೂ ಫಿಟ್‌ನೆಸ್ ಅರಿಯುವುದು ಅತ್ಯಗತ್ಯ. ಹೀಗಾಗಿ ರಾಹುಲ್ ಅವರಿಗೆ ಹೆಚ್ಚಿನ ಅವಕಾಶ ನೀಡುವುದು ನ್ಯಾಯೋಚಿತ.
Related Articles
Advertisement
ಅಗ್ರ ಕ್ರಮಾಂಕದ ಬ್ಯಾಟಿಂಗ್ ಚಿಂತೆರಾಹುಲ್-ಇಶಾನ್ ಆಯ್ಕೆ ಚರ್ಚೆಯನ್ನು ಬದಿಗಿರಿಸಿದರೆ ಗೋಚರಿಸುವುದು ಅಗ್ರ ಕ್ರಮಾಂಕದ ಬ್ಯಾಟಿಂಗ್ ಚಿಂತೆ. ರಾಹುಲ್, ಗಿಲ್, ಅಯ್ಯರ್, ಕೊಹ್ಲಿ ಅವರೆಲ್ಲ ಪಾಕಿಸ್ಥಾನ ವಿರುದ್ಧ ಸಾಲು ಸಾಲಾಗಿ ವೈಫಲ್ಯ ಅನುಭವಿಸಿದ್ದಾರೆ. ಇವರೆಲ್ಲರೂ ಬ್ಯಾಟಿಂಗ್ ಲಯಕ್ಕೆ ಮರಳಬೇಕಿದೆ. ಮುಖ್ಯವಾಗಿ ಸೀನಿಯರ್ ಬ್ಯಾಟರ್ ಕೊಹ್ಲಿ ಹಳೆಯ ಫಾರ್ಮ್ ಕಾಣುವುದು ಮುಖ್ಯ. ಕೊಲಂಬೊದಲ್ಲಿ ಆಡಿದ ಕಳೆದ 3 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಶತಕ ಬಾರಿಸಿದ್ದಾರೆ ಎಂಬುದಿಲ್ಲಿ ಉಲ್ಲೇಖನೀಯ (ಅಜೇಯ 128, 131 ಮತ್ತು ಅಜೇಯ 110 ರನ್). ಇದು 4ಕ್ಕೆ ವಿಸ್ತರಿಸಿದರೆ ಭಾರತಕ್ಕೆ ಲಾಭ ಖಚಿತ. ಅಂದಹಾಗೆ, ನೇಪಾಲ ವಿರುದ್ಧ ಸಾಧಿಸಿದ 10 ವಿಕೆಟ್ ಜಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು ಒಳ್ಳೆಯದು! ಪಾಕಿಸ್ಥಾನವೇ ಬಲಿಷ್ಠ
ಯಾವ ಕೋನದಿಂದ ನೋಡಿದರೂ ಭಾರತಕ್ಕಿಂತ ಪಾಕಿಸ್ಥಾನವೇ ಬಲಿಷ್ಠವಾಗಿ ಗೋಚರಿಸುತ್ತದೆ. ಫಖಾರ್, ಬಾಬರ್, ಇಮಾಮ್, ಇಫ್ತಿಕಾರ್, ರಿಜ್ವಾನ್, ಆಲ್‌ರೌಂಡರ್ ಶದಾಬ್ ಅವರನ್ನೊಳಗೊಂಡ ಬ್ಯಾಟಿಂಗ್ ಲೈನ್‌ಅಪ್ ಅತ್ಯಂತ ವೈವಿಧ್ಯ ಮಯ. ಎಲ್ಲರೂ ಫಾರ್ಮ್ ನಲ್ಲಿರುವುದರಿಂದ ಚಿಂತಿಸಬೇಕಾದ ಅಗತ್ಯವಿಲ್ಲ. ಪಾಕ್ ಬೌಲಿಂಗ್ ಕೂಡ ಅಪಾಯ ಕಾರಿ. ಪಲ್ಲೆಕೆಲೆಯಲ್ಲಿ ತ್ರಿವಳಿ ವೇಗಿಗಳಾದ ಅಫ್ರಿದಿ, ನಸೀಮ್ ಶಾ ಮತ್ತು ರವೂಫ್ ಸೇರಿಕೊಂಡು ಭಾರತದ ಅಷ್ಟೂ ವಿಕೆಟ್‌ಗಳನ್ನು ಉಡಾಯಿಸಿದ್ದರು. ಇವರನ್ನು ಎದುರಿಸಿ ನಿಂತು ರನ್ ಪೇರಿಸಿದರಷ್ಟೇ ಭಾರತದ ಮೇಲುಗೈ ನಿರೀಕ್ಷಿಸಬಹುದು.