Advertisement

ಇಂದು ಭಾರತ-ಪಾಕ್‌ ಸೇನಾ ಡಿಜಿಎಂಓ ಸಭೆ: ಪಾಕಿಗೆ ಪ್ರಬಲ ಪ್ರತಿಭಟನೆ

11:10 AM Oct 23, 2018 | Team Udayavani |

ಹೊಸದಿಲ್ಲಿ : ಇಂದು ಭಾರತ ಮತ್ತು ಪಾಕಿಸ್ಥಾನ ನಡುವೆ ಉಭಯ ದೇಶಗಳ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರ (DGMO) ಮಟ್ಟದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಭಾರತ, ಪಾಕಿಸ್ಥಾನದ ಬಾರ್ಡರ್‌ ಆ್ಯಕ್ಷನ್‌ ಟೀಮ್‌ (ಬ್ಯಾಟ್‌) ಈಚೆಗೆ ಎಓಸಿಯಲ್ಲಿ ಭಾರತೀಯ ಜವಾನನ್ನು ಕೊಂದ ಕೃತ್ಯಕ್ಕೆ ಮತ್ತು ಹೆಚ್ಚುತ್ತಿರುವ ಉಗ್ರರ ಒಳನುಸುಳುವಿಕೆ ಬಗ್ಗೆ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಲಿದೆ.

Advertisement

“ಡಿಜಿಎಂಓ ನಡುವಿನ ಹಾಟ್‌ಲೆçನ್‌ ಮಾತುಕತೆಯಲ್ಲಿ ಇಂದು ಭಾರತೀಯ ಸೇನೆ ಪಾಕ್‌ ಸೇನೆಯ ಪೈಶಾಚಿಕ ಕೃತ್ಯವನ್ನು ಬಲವಾಗಿ ಖಂಡಿಸಲಿದೆ ಮತ್ತು ಈಚಿನ ದಿನಗಳಲ್ಲಿ ಗಡಿಯಲ್ಲಿ ಹೆಚ್ಚುತ್ತಿರುವ ಉಗ್ರರ ನುಸುಳುವಿಕೆಯನ್ನು ತೀವ್ರವಾಗಿ ಪ್ರತಿಭಟಿಸಲಿದೆ’ ಎಂದು ಸೌತ್‌ ಬ್ಲಾಕ್‌ ನಲ್ಲಿನ ಹಿರಿಯ ಸೇನಾ ಅಧಿಕಾರಿಯೋರ್ವರು ಹೇಳಿದರು. 

ಉಭಯ ದೇಶಗಳ ಸೇನಾ ಕಾರ್ಯಾಚರಣೆ ಮಹಾ ನಿರ್ದೇಶಕರ ನಡುವೆ ಪರಸ್ಪರ ಮಾತುಕತೆಗೆ ಅವಕಾಶ ಕಲ್ಪಿಸುವ ಹಾಟ್‌ ಲೈನ್‌ ವ್ಯವಸ್ಥೆ ಇದೆ ಅದನ್ನು ಬಳಸಿಕೊಂಡು ಇಂದು ಮಧ್ಯಾಹ್ನ ನಿರ್ಣಾಯಕ ಸೇನಾ ಮಾತುಕತೆಗಳು ನಡೆಯಲಿವೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next