Advertisement

ಲಸಿಕಾ ಅಭಿಯಾನದಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ : ಕೇಂದ್ರ ಆರೋಗ್ಯ ಸಚಿವಾಲಯ

05:13 PM Jun 28, 2021 | Team Udayavani |

ನವ ದೆಹಲಿ : ಈವರೆಗೆ ನೀಡಲಾದ ಒಟ್ಟು ಕೋವಿಡ್ 19 ಲಸಿಕೆಗಳ ಪ್ರಮಾಣದಲ್ಲಿ ಅಮೆರಿಕಾವನ್ನು ಹಿಂದಿಕ್ಕಿದೆ ಎಂದು ಇಂದು(ಸೋಮವಾರ, ಜೂನ್ 28) ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Advertisement

ಜನವರಿ 16 ರಂದು ಲಸಿಕಾ ಅಭಿಯಾನವನ್ನು ಆರಂಭಿಸಿದ ಭಾರತ ಸರ್ಕಾರ ಈವರೆಗೆ ಒಟ್ಟು 323.6 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡಿದೆ. ಆದರೇ, ಕಳೆದ ವರ್ಷ ಡಿಸೆಂಬರ್ ನಲ್ಲಿ 14 ರಂದು ಲಸಿಕಾ ಅಭಿಯಾನವನ್ನು ಆರಂಭಿಸಿದ ಅಮೆರಿಕಾ, ಈವರೆಗೆ ಒಟ್ಟು 323.3 ಮಿಲಿಯನ್ ಕೋವಿಡ್ ಲಸಿಕೆಗಳನ್ನು ನೀಡಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ :   ಡಿಕೆ ಶಿವಕುಮಾರ್ ಭೇಟಿಯಾದ ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು

ಈ ಮುಖೇನ ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶದಾದ್ಯಂತ ಕೋವಿಡ್ ಲಸಿಕಾ ಅಭಿಯಾನವನ್ನು ಆರಂಭಿಸಿ, ಕಡಿಮೆ ಅವಧಿಯಲ್ಲಿ ಈ ವರೆಗೆ ಒಟ್ಟು 323.6 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡುವ ಮೂಲಕ ಮತ್ತೊಂದು ದಾಖಲೆ ಮಾಡಿದೆ ಎಂದು ಸಚಿವಾಲಯ ಅಭಿಪ್ರಾಯ ಪಟ್ಟಿದೆ.

ಭಾರತದಲ್ಲಿ ವ್ಯಾಕ್ಸಿನೇಷನ್ ಅಥವಾ ಲಸಿಕಾ ಅಭಿಯಾನ ಭಾನುವಾರದವರೆಗೆ 323.6 ಮಿಲಿಯನ್ ಮೀರಿದೆ. ಒಟ್ಟು 32,36,63,297 ಲಸಿಕೆ ಡೋಸ್ ಗಳನ್ನು ಈವರೆಗೆ ದೇಶದಾದ್ಯಂತ ನೀಡಲಾಗಿದೆ.

Advertisement

ಇನ್ನು, ಕಳೆದ 24 ಗಂಟೆಗಳಲ್ಲಿ 17,21,268 ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಯಾರ್ ಯಾರಿಗೆ ಲಸಿಕೆಗಳನ್ನು ನೀಡಲಾಗಿದೆ..?

1,01,98,257 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ತೆಗೆದುಕೊಂಡಿದ್ದರೆ, 72,07,617 ಮಂದಿ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.

1,74,42,767 ಫ‍್ರಂಟ್ ಲೈನ್ ವರ್ಕರ್ಸ್ ಮೊದಲ ಡೋಸ್ ಪಡೆದಿದ್ದರೆ, 93,99,319 ಮಂದಿ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. 18-44 ವಯೋಮಾನದವರಲ್ಲಿ 8,46,51,696 ಮಂದಿ ಮೊದಲ ಡೋಸ್ ತೆಗೆದುಕೊಂಡರೆ, 19,01,190 ಜನರು ಎರಡನೇ ಡೋಸ್ ಪಡೆದಿದ್ದಾರೆ.

45-59 ವಯೋಮಾನದವರಲ್ಲಿ, 8,71,11,445 ಜನರಿಗೆ ಮೊದಲ ಡೋಸ್ ನೀಡಿದರೆ, 1,48,12,349 ಜನರು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.

ಅಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟ 6,75,29,713 ಮಂದಿ ಮೊದಲ ಡೋಸ್ ಪಡೆದಿದ್ದರೆ, 2,34,08,944 ಮಂದಿ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ :   ತನ್ನ ಬಳಕೆದಾರರಿಗೆ ಮತ್ತೆರಡು ವಿಶೇಷತೆಗಳನ್ನು ನೀಡುತ್ತಿದೆ ವಾಟ್ಸ್ಯಾಪ್ ..!

Advertisement

Udayavani is now on Telegram. Click here to join our channel and stay updated with the latest news.

Next