ನವದೆಹಲಿ : ಕಿಡಂಬಿ ಶ್ರೀಕಾಂತ್ ಮತ್ತು ಇತರ ಆರು ಆಟಗಾರರು ಕೋವಿಡ್ -19 ಪಾಸಿಟಿವ್ ಪರೀಕ್ಷೆಯ ನಂತರ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಸೇರಿದಂತೆ ಏಳು ಭಾರತೀಯ ಷಟ್ಲರ್‌ಗಳಿಗೆ ಕೋವಿಡ್ ನಂತರ ಪಂದ್ಯಾವಳಿ ಯಿಂದ ಹಿಂದೆ ಸರಿಯುವುದರೊಂದಿಗೆ ಇಂಡಿಯಾ ಓಪನ್ ಪಂದ್ಯಾವಳಿಯು ಸಾಂಕ್ರಾಮಿಕ ರೋಗದಿಂದಾಗಿ ತತ್ತರಿಸಿದೆ.
ಗುರುವಾರ ಮುಂಜಾನೆ, ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಸೋಂಕು ದೃಢ ಪಟ್ಟವರ ಹೆಸರುಗಳನ್ನು ಪ್ರಕಟಿಸಿದೆ. ಶ್ರೀಕಾಂತ್ ಅಲ್ಲದೆ, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಕರ್, ಟ್ರೀಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾ ಸೋಂಕಿತ ಇತರ ಆಟಗಾರರು.
ಮುಖ್ಯ ಡ್ರಾದಲ್ಲಿ ಆಟಗಾರರನ್ನು ಬದಲಾಯಿಸಲಾಗುವುದಿಲ್ಲ ಮತ್ತು ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್‌ಓವರ್ ನೀಡಲಾಗುತ್ತದೆ.
ಇದಕ್ಕೂ ಮೊದಲು, 2019 ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಬಿ ಸಾಯಿ ಪ್ರಣೀತ್, ಡಬಲ್ ಸ್ಪೆಷಲಿಸ್ಟ್‌ಗಳಾದ ಮನು ಅತ್ರಿ ಮತ್ತು ಧ್ರುವ್ ರಾವತ್ ಅವರು ದೆಹಲಿಗೆ ಆಗಮಿಸುವ ಮೊದಲು ಪಾಸಿಟಿವ್ ಆಗಿ ಪಂದ್ಯಾವಳಿಯ ಆರಂಭದ ಮೊದಲೇ ಹಿಂದೆ ಸರಿದಿದ್ದರು.