Advertisement
ಭಾರತ ವಿದೇಶಾಂಗ ಇಲಾಖೆ ಈಗಾ ಗಲೇ ಚೀನ ಆಟಗಾರರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆಗೆ ಸೂಚಿಸಿದೆ. ಇದನ್ನು ಭಾರತ ಬ್ಯಾಡ್ಮಿಂಟನ್ ಸಂಸ್ಥೆ, ಚೀನದ ಬ್ಯಾಡ್ಮಿಂಟನ್ ಸಂಸ್ಥೆಗೆ ರವಾನೆ ಮಾಡಿ ಉತ್ತರಕ್ಕಾಗಿ ಕಾದು ಕುಳಿತಿದೆ.
ಚೀನ ಬ್ಯಾಡ್ಮಿಂಟನ್ ಪಟುಗಳಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಈ ಪಂದ್ಯಾವಳಿ ಅನಿವಾರ್ಯವಾಗಿದೆ. ಇದನ್ನು ತಪ್ಪಿಸಿಕೊಳ್ಳಲು ಅವರು ಸಿದ್ಧರಿಲ್ಲ. ಅವರನ್ನು ಸೇರಿಸಿಕೊಂಡರೆ, ಕೊರೊನಾ ಭಾರತವನ್ನು ಪ್ರವೇಶಿಸುವ ಭೀತಿ ಎದುರಾಗಲಿದೆ. ಒಂದು ಆಶಾ ದಾಯಕ ಸಂಗತಿಯೆಂದರೆ, ಚೀನ ಬಹುತೇಕ ಬ್ಯಾಡ್ಮಿಂಟನ್ ಆಟಗಾರರೆಲ್ಲ ವಿದೇಶಗಳಲ್ಲೇ ಇದ್ದಾರೆ. ಆದ್ದರಿಂದ ಅವರನ್ನು ಭಾರತಕ್ಕೆ ಕರೆಸಿಕೊಳ್ಳು ವುದರಿಂದ ಯಾವುದೇ ಅಪಾಯ ಎದುರಾಗುವ ಸಾಧ್ಯತೆ ಇಲ್ಲ. ಸದ್ಯ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಮುಂದಿರುವ ಆಶಾವಾದ ಇದೊಂದೇ.ಈ ನಡುವೆ ಮಾ. 24ರಿಂದ 29ರ ವರೆಗೆ ನಡೆಯಬೇಕಿರುವ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆ ಯುವ ಬಗ್ಗೆಯೇ ಅನುಮಾನವಿದೆ. ಕಡೆಯ ಹಂತದಲ್ಲಿ ಕೂಟ ರದ್ದಾದರೂ ಅಚ್ಚರಿಯಿಲ್ಲ.