Advertisement

India Open Badminton: ಸೇನ್‌ಗೆ ಆಘಾತವಿಕ್ಕಿದ ಪ್ರಿಯಾಂಶು

12:18 AM Jan 17, 2024 | Team Udayavani |

ಹೊಸದಿಲ್ಲಿ: “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ಆರಂಭದ ದಿನವೇ ಅಚ್ಚರಿಯ ಫ‌ಲಿತಾಂಶ ದಾಖಲಾಗಿದೆ. “ಆಲ್‌ ಇಂಡಿಯಾ’ ಮುಖಾಮುಖೀ ಯೊಂದರಲ್ಲಿ ಪ್ರತಿಭಾನ್ವಿತ ಶಟ್ಲರ್‌ ಪ್ರಿಯಾಂಶು ರಾಜಾವತ್‌ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಅವರಿಗೆ ಮೊದಲ ಸುತ್ತಿನಲ್ಲೇ ಸೋಲಿನ ಸುಳಿಗೆ ತಳ್ಳಿದ್ದಾರೆ. ರಾಜಾವತ್‌ ಜತೆಗೆ ಎಚ್‌.ಎಸ್‌. ಪ್ರಣಯ್‌ ದ್ವಿತೀಯ ಸುತ್ತು ತಲುಪಿದ್ದಾರೆ.

Advertisement

ವಿಶ್ವ ರ್‍ಯಾಂಕಿಂಗ್‌ನಲ್ಲಿ 30ನೇ ಸ್ಥಾನ ದಲ್ಲಿರುವ ಪ್ರಿಯಾಂಶು ರಾಜಾವತ್‌ 19ನೇ ರ್‍ಯಾಂಕಿಂಗ್‌ ಆಟಗಾರ ಲಕ್ಷ್ಯ ಸೇನ್‌ ಅವರನ್ನು 16-21, 21-16, 21-13 ಅಂತರದಿಂದ ಮಣಿಸಿದರು. 75 ನಿಮಿಷಗಳ ತನಕ ಇವರ ಹೋರಾಟ ಸಾಗಿತು.

ಪುರುಷರ ಇನ್ನೊಂದು ಸಿಂಗಲ್ಸ್‌ ಪಂದ್ಯದಲ್ಲಿ ಎಚ್‌.ಎಸ್‌. ಪ್ರಣಯ್‌ ಚೈನೀಸ್‌ ತೈಪೆಯ ಚೌ ಟೀನ್‌ ಚೆನ್‌ ಅವರನ್ನು 21-6, 21-19 ಅಂತರದಿಂದ ಮಣಿಸಿದರು. “ಕೆ.ಡಿ. ಜಾಧವ್‌ ಇಂಡೋರ್‌ ಹಾಲ್‌’ನಲ್ಲಿ ಸಾಗಿದ ಈ ಪಂದ್ಯ 42 ನಿಮಿಷಗಳಲ್ಲಿ ಮುಗಿಯಿತು.

ವಿಜೇತರಾದ ಪ್ರಿಯಾಂಶು ರಾಜಾವತ್‌ ಮತ್ತು ಎಚ್‌.ಎಸ್‌. ಪ್ರಣಯ್‌ ದ್ವಿತೀಯ ಸುತ್ತಿನಲ್ಲಿ ಎದುರಾಗಲಿದ್ದಾರೆ. ಇದರೊಂದಿಗೆ ಮತ್ತೂಂದು “ಆಲ್‌ ಇಂಡಿಯಾ’ ಸ್ಪರ್ಧೆಗೆ ವೇದಿಕೆ ಸಜ್ಜುಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next