Advertisement

India Open Badminton: ಶ್ರೀಕಾಂತ್‌ಗೆ ಸೋಲು

12:22 AM Jan 18, 2024 | Team Udayavani |

ಹೊಸದಿಲ್ಲಿ: ಸ್ಟಾರ್‌ ಶಟ್ಲರ್‌ ಕೆ. ಶ್ರೀಕಾಂತ್‌ ‘ಇಂಡಿಯಾ ಓಪನ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಹೊರಬಿದ್ದರು. ಹಾಂಕಾಂಗ್‌ನ ಲೀ ಚುಕ್‌ ವ್ಯೂ ವಿರುದ್ಧ ದಿಟ್ಟ ಹೋರಾಟ ನಡೆಸಿದ ಶ್ರೀಕಾಂತ್‌ 22-24, 13-21 ಅಂತರದಿಂದ ಪರಾಭವಗೊಂಡರು.

Advertisement

ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ- ತನಿಷಾ ಕ್ರಾಸ್ಟೊ ಕೂಡ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಇವರೆದುರು ಥಾಯ್ಲೆಂಡ್‌ನ‌ ಜೊಂಗೊRಲ್ಫಾನ್‌ ಕಿಟಿ ಥಾರಾಕುಲ್‌-ರವಿಂಡಾ ಪ್ರಾಜೊಂಗ್‌ಜಾಯ್‌ 21-15, 18-21, 21-11 ಅಂತರದ ಜಯ ಸಾಧಿಸಿದರು.
ರಾತ್ರಿ ನಡೆದ ಪಂದ್ಯದಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮೊದಲ ಸುತ್ತಿನ ಜಯ ಸಾಧಿಸಿ ಮುನ್ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next