Advertisement

ಇಂಡಿಯಾ ಓಪನ್‌ : ಹಾಲಿ ಚಾಂಪಿಯನ್‌ ಲಕ್ಷ್ಯ ಸೇನ್‌ ಪರಾಭವ

10:41 PM Jan 19, 2023 | Team Udayavani |

ಹೊಸದಿಲ್ಲಿ: ಹಾಲಿ ಚಾಂಪಿಯನ್‌ ಲಕ್ಷ್ಯ ಸೇನ್‌ “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲೇ ಪರಾಭವಗೊಂಡು ಹೊರಬಿದ್ದರು.

Advertisement

ವಿಶ್ವದ ನಂ. 12 ಆಟಗಾರನಾಗಿರುವ ಲಕ್ಷ್ಯ ಸೇನ್‌ ತನಗಿಂತ ಕೆಳ ಕ್ರಮಾಂಕದ ಡೆನ್ಮಾರ್ಕ್‌ ಶಟ್ಲರ್‌ ರಾಸ್ಮಸ್‌ ಜೆಮ್ಕೆ ವಿರುದ್ಧ 3 ಗೇಮ್‌ಗಳ ಜಿದ್ದಾಜಿದ್ದಿ ಹೋರಾಟದಲ್ಲಿ ಮುಗ್ಗರಿಸಿದರು. ಅಂತರ 21-16, 15-21, 18-21.

ಇದೇ ವೇಳೆ ಪುರುಷರ ಡಬಲ್ಸ್‌ ಚಾಂಪಿ ಯನ್‌ ಆಗಿರುವ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಕಡೆಯಿಂದಲೂ ಆಘಾತಕಾರಿ ಸುದ್ದಿ ಬಂತು. ಗಾಯಾಳಾದ ಕಾರಣ ಈ ಜೋಡಿ ಸ್ಪರ್ಧೆಯಿಂದ ಹಿಂದೆ ಸರಿಯಿತು.

ವನಿತಾ ಸಿಂಗಲ್ಸ್‌ನಲ್ಲಿ ಗಾಯತ್ರಿ ಗೋಪಿ ಚಂದ್‌-ತಿೃಷಾ ಜಾಲಿ ಕೂಡ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next