Advertisement

ಆತ್ಮ ನಿರ್ಭರದತ್ತ ಭಾರತ: ಖೂಬಾ

10:44 AM Jul 11, 2020 | Suhan S |

ಬೀದರ: ಆತ್ಮನಿರ್ಭರ ಭಾರತದಡಿ ರೈತರು, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಹೈನುಗಾರಿಕೆಗಾರರು ಸೇರಿದಂತೆ ವಿವಿಧ ವಲಯದವರು ಲಾಭ ಪಡೆಯುತ್ತಿದ್ದಾರೆ. ದೇಶ ಆತ್ಮ ನಿರ್ಭರದತ್ತ ಸಾಗುತ್ತಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಿಂದ ಜಿಲ್ಲೆ ಸೇರಿದಂತೆ ದೇಶದ ಲಕ್ಷಾಂತರ ಜನರು ಲಾಭಾರ್ಥಿಗಳಾಗಿದ್ದಾರೆ ಎಂದು ತಿಳಿಸಿದರು. ಜನಧನ ಯೋಜನೆಯಡಿ 3,55,786 ಫಲಾನುಭವಿಗಳು, ಉಜ್ವಲ್‌ ಯೋಜನೆಯಡಿ 2,00,250., ಗರೀಬ್‌ ಕಲ್ಯಾಣ, ವೃದ್ಯಾಪ ವೇತನ, ವಿಧವಾ ವೇತನ ಮುಂತಾದ ವೇತನಗಳು ಪಡೆದವರ ಸಂಖ್ಯೆ 2,35,254 ಇದೆ. ನರೇಗಾದಡಿ 2,75,528 ಕುಟುಂಬಗಳು ನೋಂದಣಿಯಾಗಿದ್ದಾರೆ ಎಂದು ತಿಳಿಸಿದರು.

ಆಯುಷ್ಮಾನ್‌ ಭಾರತ ಯೋಜನೆಯಡಿ 15,534 ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದಾರೆ. ಎಂಎಸ್‌ಪಿಯಲ್ಲಿ ಫಲಾನುಭವಿ ರೈತರು (ತೊಗರಿ) 57,193 ಹಾಗೂ ಎಂಎಸ್‌ಪಿಯಲ್ಲಿ ಕಡಲೆ ಫಲಾನುಭವಿ ರೈತರು 13,915 ಇದ್ದಾರೆ. ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಡಿ 2,15,974 ರೈತರು ಲಾಭ ಪಡೆದಿದ್ದಾರೆ. ಗರೀಬ್‌ ಕಲ್ಯಾಣ ಯೋಜನೆಯಡಿ ಪಡಿತರ ಪಡೆದವರ ಸಂಖ್ಯೆ4,93,267 ಇದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌, ಎಂಎಲ್‌ಸಿ ರಘುನಾಥ ಮಲ್ಕಾಪುರೆ, ವಿಭಾಗೀಯ ಪ್ರಮುಖ ಈಶ್ವರಸಿಂಗ್‌ ಠಾಕೂರ್‌, ನಗರಾಧ್ಯಕ್ಷ ಹಣಮಂತ ಬುಳ್ಳಾ, ಬಸವರಾಜ ಜೋಜನಾ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next