Advertisement

ನಾಸಿರ್‌ ಹುಸೇನ್‌ ಸೆಮಿ ಯಾದಿಯಲ್ಲಿ ಭಾರತ

03:14 AM May 13, 2019 | Team Udayavani |

ಲಂಡನ್‌: ಇಂಗ್ಲೆಂಡಿನ ಮಾಜಿ ನಾಯಕ, ಭಾರತೀಯ ಮೂಲದ ಕ್ರಿಕೆಟಿಗ ನಾಸಿರ್‌ ಹುಸೇನ್‌ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ತಂಡಗಳನ್ನು ಆಯ್ದಿದ್ದಾರೆ. ಈ ಯಾದಿಯಲ್ಲಿ ಭಾರತವೂ ಸೇರಿದೆ.

Advertisement

ನಾಸಿರ್‌ ಹುಸೇನ್‌ ಪ್ರಕಾರ ಆತಿಥೇಯ ಇಂಗ್ಲೆಂಡ್‌, ಪಾಕಿಸ್ಥಾನ ಮತ್ತು ಆಸ್ಟ್ರೇಲಿಯ ವಿಶ್ವಕಪ್‌ ಸೆಮಿಫೈನಲ್ ಪ್ರವೇಶಿಸಬಲ್ಲ ಉಳಿದ 3 ತಂಡಗಳು.

‘ಸ್ಕೈ ನ್ಪೋರ್ಟ್ಸ್’ ಜತೆ ಮಾತಾಡಿದ ನಾಸಿರ್‌ ಹುಸೇನ್‌, ‘ಭಾರತ ತಂಡ ಅತ್ಯುತ್ತಮ ರೀತಿಯಲ್ಲಿ ಮುಂದೆ ಸಾಗುತ್ತಿದೆ. ತಂಡದಲ್ಲಿ ಉತ್ತಮ ಹೊಂದಾಣಿಕೆ ಇದೆ. ಇಂಗ್ಲೆಂಡ್‌ ಮೇಲೆ ತವರಿನ ಒತ್ತಡವಿದ್ದರೂ ಅದೊಂದು ಅಮೋಘ ತಂಡ. ನ್ಯೂಜಿಲ್ಯಾಂಡ್‌ ಮತ್ತು ಪಾಕಿಸ್ಥಾನ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಯಲ್ಲಿ ಮುಳುಗಿಸುವ ಸಾಧ್ಯತೆ ಇದೆ. ಆದರೆ ನನ್ನ ಪ್ರಕಾರ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ಸೆಮಿಫೈನಲ್ಗೆ ಏರುವ ಸಾಧ್ಯತೆ ಹೆಚ್ಚು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next