Advertisement

ಈಜಿಪ್ಟ್ ನಲ್ಲಿ ಎಲ್‌ಸಿಜೆ ಘಟಕ ಶೀಘ್ರ? ಈಜಿಪ್ಟ್- ಭಾರತದ ನಡುವೆ ಉನ್ನತ ಮಟ್ಟದ ಮಾತುಕತೆ

04:06 PM Jun 28, 2022 | Team Udayavani |

ಹೊಸದಿಲ್ಲಿ: ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ರಕ್ಷಣ ಸಾಮಗ್ರಿಗಳ ರಫ್ತು ವಿಸ್ತರಣೆಯ ಗುರಿ ಹಾಕಿಕೊಂಡಿರುವ ಭಾರತವು ಈಗ ಈಜಿಪ್ಟ್ ನಲ್ಲಿ ಲಘು ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನ ಘಟಕಗಳನ್ನು ತೆರೆಯಲು ನಿರ್ಧರಿಸಿದೆ.

Advertisement

ಭಾರತ ಮತ್ತು ಈಜಿಪ್ಟ್ ವಾಯು ಪಡೆ ಮುಖ್ಯಸ್ಥರ ನಡುವೆ ಈ ಕುರಿತು ಉನ್ನತ ಮಟ್ಟದ ಸರಣಿ ಮಾತುಕತೆಗಳು ಈಗಾಗಲೇ ನಡೆದಿವೆ. ಕೆಲವೇ ದಿನಗಳಲ್ಲಿ ಈಜಿಪ್ಟ್ ವಾಯುಪಡೆ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡಿ, ಯುದ್ಧ ವಿಮಾನಗಳ ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಭಾರತದ ಪರಿಣತಿಯ ಕುರಿತು ಪರಿಶೀಲನೆಯನ್ನೂ ನಡೆಸಲಿದ್ದಾರೆ.

70 ಎಲ್‌ಸಿಜೆ ಬೇಕಂತೆ: ಪ್ರಸ್ತುತ ಈಜಿಪ್ಟ್ ವಾಯುಪಡೆಗೆ ಸುಮಾರು 70 ಲಘು ಯುದ್ಧ ವಿಮಾನಗಳ ಆವಶ್ಯಕತೆಯಿದ್ದು, ಸ್ಥಳೀಯವಾಗಿ ಉತ್ಪಾದನೆ ಮಾಡಲು ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಈಗ ಅಲ್ಲಿ ಅಮೆರಿಕ, ಫ್ರಾನ್ಸ್‌ ಮತ್ತು ರಷ್ಯಾ ಮೂಲದ ಜೆಟ್‌ಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ.

ಈಗ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಲಿದ್ದು, ಅಲ್ಲೇ ಉತ್ಪಾದನ ಘಟಕವನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.
ಕೇವಲ ತೇಜಸ್‌ ಲಘು ಯುದ್ಧ ವಿಮಾನ ಎಂಕೆ1ಎ ಮಾತ್ರವಲ್ಲದೇ ಸ್ವದೇಶಿ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್‌(ಎಎಲ್‌ಎಚ್‌) ಮತ್ತು ಲಘು ಯುದ್ಧ ಹೆಲಿಕಾಪ್ಟರ್‌ (ಎಲ್‌ಸಿಎಚ್‌)ಗಳನ್ನೂ ಅಲ್ಲಿ ನಿರ್ಮಿಸಲು ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next