Advertisement

ಹಿಂಜರಿತ: ಕ್ಷೇತ್ರವಾರು ಪರಿಹಾರ

10:37 AM Oct 12, 2019 | Team Udayavani |

ಮುಂಬಯಿ: ಆರ್ಥಿಕ ಕ್ಷೇತ್ರದಲ್ಲಿನ ಹಿಂಜರಿತ ಎದುರಿಸುವ ನಿಟ್ಟಿನಲ್ಲಿ ಸರಕಾರ ಕ್ಷೇತ್ರವಾರು ಪರಿಹಾರಗಳನ್ನು ನೀಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಮುಂಬಯಿನಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಸುಧಾರಿಸಲು ಸರಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

Advertisement

ರಫ್ತು ಕ್ಷೇತ್ರದಲ್ಲಿ ಸುಧಾರಣೆ, ಸುಲಭದಲ್ಲಿ ಸಾಲ, ಬ್ಯಾಂಕ್‌ಗಳಿಗೆ ಮರು ಬಂಡವಾಳ, ಹೆಚ್ಚಿನ ಪ್ರಮಾಣದಲ್ಲಿ ಹಣದ ಹರಿವು ಸೇರಿದಂತೆ ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕ್ಷೇತ್ರವಾರು ಪರಿಹಾರಗಳನ್ನು ಸರಕಾರ ಪ್ರಕಟಿಸಲಿದೆ ಎಂದಿದ್ದಾರೆ.

ಆರ್‌ಬಿಐ ಜತೆ ಚರ್ಚೆ: ಪಂಜಾಬ್‌, ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಮೊತ್ತ ವಿತ್‌ಡ್ರಾಗೆ ಅನುಮತಿ ನೀಡುವಂತೆ ಆರ್‌ಬಿಐ ಗವರ್ನರ್‌ ಜತೆ ಚರ್ಚಿಸುವುದಾಗಿ ಸಚಿವೆ ಹೇಳಿದ್ದಾರೆ. ಇದರ ಜತೆಗೆ ಇಂಥ ಘಟನೆ ತಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸುವ ಬಗ್ಗೆಯೂ ಮಾತನಾಡಿದ್ದಾರೆ. ಮುಂಬಯಿನಲ್ಲಿ ಸುದ್ದಿಗೋಷ್ಠಿ ನಡೆಸಲು ನಿರ್ಮಲಾ ಆಗಮಿಸುತ್ತಿದ್ದಂತೆಯೇ ಬ್ಯಾಂಕ್‌ ಗ್ರಾಹಕರ ಪ್ರತಿಭಟನೆ ಎದುರಿಸಬೇಕಾಯಿತು. ಅವರನ್ನು ಸಮಾಧಾನಪಡಿಸಿ ಕ್ರಮದ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next