Advertisement
ಸರಣಿಯಲ್ಲಿ 3 ಟೆಸ್ಟ್ ಪಂದ್ಯಗಳ ಜತೆಗೆ 3 ಏಕದಿನ ಪಂದ್ಯಗಳನ್ನೂ ಆಡಲಾಗುವುದು. ಮುಂಬರುವ ಕಠಿನ ಆಸ್ಟ್ರೇಲಿಯ ಪ್ರವಾಸದ ಹಿನ್ನೆಲೆಯಲ್ಲಿ ಭಾರತದ ಆಟಗಾರರ ಪಾಲಿಗೆ ಇದೊಂದು ಅಭ್ಯಾಸ ಸರಣಿಯಾಗಲಿದೆ. ಭಾರತದ 5 ಮಂದಿ ಟೆಸ್ಟ್ ಆಟಗಾರರು “ಎ’ ತಂಡದಲ್ಲಿದ್ದಾರೆ.
ಈ ಸರಣಿಗಾಗಿ ಭಾರತ 2 ಪ್ರತ್ಯೇಕ ತಂಡಗಳನ್ನು ರಚಿಸಿದ್ದು ವಿಶೇಷ. ಮೊದಲ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಭಾರತ “ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದೆರಡು ಟೆಸ್ಟ್ ಪಂದ್ಯಗಳ ವೇಳೆ ಕರುಣ್ ನಾಯರ್ ನಾಯಕರಾಗಿರುತ್ತಾರೆ.
Related Articles
Advertisement
ಆತಿಥೇಯ ನ್ಯೂಜಿಲ್ಯಾಂಡ್ ಆಟಗಾರರಿಗೂ ಇದೊಂದು ಮಹತ್ವದ ಸರಣಿ. ಅಗ್ರ ಕ್ರಮಾಂಕದ ಗ್ಲೆನ್ ಫಿಲಿಪ್ಸ್, 18ರ ಹರೆಯದ ರವೀಂದ್ರ ರಚಿತ, ಜಾರ್ಜ್ ವರ್ಕರ್ ಮೇಲೆ ಆಯ್ಕೆಗಾರರು ಹದ್ದಿನಗಣ್ಣಿರಿಸಿದ್ದಾರೆ.
ಸಂಭಾವ್ಯ ತಂಡಗಳುಭಾರತ “ಎ’: ಪೃಥ್ವಿ ಶಾ, ಮುರಳಿ ವಿಜಯ್, ಮಾಯಾಂಕ್ ಅಗರ್ವಾಲ್, ಅಜಿಂಕ್ಯ ರಹಾನೆ (ನಾಯಕ), ಹನುಮ ವಿಹಾರಿ, ಪಾರ್ಥಿವ್ ಪಟೇಲ್ (ವಿ.ಕೀ.), ಕೃಷ್ಣಪ್ಪ ಗೌತಮ್/ವಿಜಯ್ ಶಂಕರ್, ಶಾಬಾಜ್ ನದೀಂ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ರಜನೀಶ್ ಗುರ್ಬಾನಿ.
ನ್ಯೂಜಿಲ್ಯಾಂಡ್ “ಎ’: ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಜಾರ್ಜ್ ವರ್ಕರ್, ವಿಲ್ ಯಂಗ್, ಟಿಮ್ ಸೀಫರ್ಟ್, ಡೇನ್ ಕ್ಲೆವರ್, ಲಾಗನ್ ವಾನ್ ಬೀಕ್, ಡಗ್ ಬ್ರೇಸ್‌ವೆಲ್, ಕೈಲ್ ಜಾಮಿಸನ್, ಸೇತ್ ರ್ಯಾನ್ಸ್, ಸ್ಲಾಟ್ ಕ್ಯುಗೆಲೀನ್.