Advertisement

” Israel-ಹಮಾಸ್‌ನಂತಹ ಯುದ್ಧ ಭಾರತದಲ್ಲೆಂದೂ ಸಂಭವಿಸಿಲ್ಲ’: ಮೋಹನ್‌ ಭಾಗವತ್‌

08:01 PM Oct 22, 2023 | Team Udayavani |

ನಾಗಪುರ: ಎಲ್ಲ ಮತೀಯರನ್ನು ಹಿಂದೂ ಧರ್ಮ ಗೌರವಿಸುತ್ತದೆ. ಇಸ್ರೇಲ್‌-ಹಮಾಸ್‌ ನಡುವೆ ಯಾವ ಕಾರಣಕ್ಕೆ ಯುದ್ಧ ನಡೆಯುತ್ತಿದೆಯೋ, ಆ ಕಾರಣಕ್ಕೆ ಭಾರತದಲ್ಲಿ ಎಂದೂ ಯುದ್ಧಗಳು ನಡೆದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಛತ್ರಪತಿ ಶಿವಾಜಿ ಮಹಾರಾಜರು ಪಟ್ಟಾಭಿಷಿಕ್ತರಾಗಿ 350 ವರ್ಷಗಳಾದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಈ ದೇಶದಲ್ಲಿರುವ ಧರ್ಮ, ಸಂಸ್ಕೃತಿಗಳು ಎಲ್ಲ ಮತ, ನಂಬಿಕೆಗಳನ್ನೂ ಗೌರವಿಸುತ್ತದೆ. ಅದೇ ಹಿಂದೂ ಧರ್ಮ. ಇದು ಹಿಂದೂಗಳ ದೇಶ. ಅದರರ್ಥ ನಾವು ಇತರರನ್ನೆಲ್ಲ ತಿರಸ್ಕರಿಸುತ್ತೇವೆ ಎಂದಲ್ಲ. ಒಮ್ಮೆ ನೀವು ಹಿಂದೂ ಎಂದು ಹೇಳುತ್ತೀರಾದರೆ, ಮುಸ್ಲಿಮರನ್ನು ರಕ್ಷಿಸಬೇಕು ಎಂದು ಹೇಳುವ ಅಗತ್ಯವೇ ಇಲ್ಲ. ಹೀಗೆ ಹಿಂದೂಗಳು ಮಾತ್ರ ಬದುಕುತ್ತಾರೆ. ಭಾರತದಲ್ಲಿ ಮಾತ್ರ ಹೀಗೆ ನಡೆಯುತ್ತದೆ. ಉಳಿದವರು ಇದನ್ನು ಮಾಡಿಲ್ಲ’ ಎಂದು ಭಾಗವತ್‌ ಹೇಳಿದ್ದಾರೆ.

ಪ್ರತೀಕಡೆ ಬಿರುಕುಗಳು, ಸಂಘರ್ಷಗಳಿವೆ. ನೀವು ಉಕ್ರೇನ್‌, ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ಕೇಳಿದ್ದೀರಿ. ನಮ್ಮ ದೇಶದಲ್ಲಿ ಇಂತಹ ಕಾರಣಕ್ಕೆ ಎಂದೂ ಯುದ್ಧ ನಡೆದಿಲ್ಲ. ಶಿವಾಜಿ ಮಹಾರಾಜರ ಕಾಲದಲ್ಲಿ ಈ ದೇಶದ ಮೇಲೆ ನಡೆದ ಆಕ್ರಮಣಗಳು ಅದೇ ಮಾದರಿಯಲ್ಲಿದ್ದವು. ಆದರೂ ನಾವು ಆ ಕಾರಣಕ್ಕಾಗಿ ಯುದ್ಧ ಮಾಡಿಲ್ಲ. ಆ ಕಾರಣಕ್ಕಾಗಿಯೇ ನಾವು ಹಿಂದೂಗಳು ಎಂದು ಭಾಗವತ್‌ ವಿವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next