Advertisement

ನೆದರ್ಲೆಂಡ್‌ ಮೆಚ್ಚುಗೆ

06:00 AM May 25, 2018 | |

ಹೊಸದಿಲ್ಲಿ: ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ ಭಾರತ ಸರಕಾರ ಹಮ್ಮಿಕೊಂಡಿರುವ ನಮಾಮಿ ಗಂಗೆ ಯೋಜನೆಗೆ ನೆದರ್ಲೆಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಯೋಜನೆಯು ಪರಿಸರ ಉಳಿಸುವುದಕ್ಕಾಗಿ ಸದ್ಯದ ಅಗತ್ಯ ಎಂದಿದ್ದಾರೆ. ಭಾರತಕ್ಕೆ ಆಗಮಿಸಿರುವ ಮಾರ್ಕ್‌ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಈ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಭಾರತ ನೇತೃತ್ವ ವಹಿಸಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ನೆದರ್ಲೆಂಡ್‌  ಸಹಿ ಹಾಕಿದೆ.

Advertisement

ನೀರು, ಕೃಷಿ, ತೋಟಗಾರಿಕೆ, ತಂತ್ರಜ್ಞಾನ, ಆರೋಗ್ಯ ಸೇರಿ ದಂತೆ ಹಲವು ವಲಯಗಳಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸೌರ ಒಕ್ಕೂಟಕ್ಕೆ ನೆದರ್ಲೆಂಡ್‌  ಸಹಿ ಹಾಕಿರುವುದು ಖುಷಿಯ ಸಂಗತಿ ಎಂದು ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next