Advertisement

ಭಾರತ- ನೇಪಾಲ ಮತ್ತೆ ದೋಸ್ತಿ; ನ.4ರಂದು ಜ|ನರವಣೆ ಕಠ್ಮಂಡು ಭೇಟಿ

12:50 AM Nov 02, 2020 | mahesh |

ಹೊಸದಿಲ್ಲಿ: ಚೀನ ಕುಮ್ಮಕ್ಕು, ರಸ್ತೆ ನಿರ್ಮಾಣ ಆಕ್ಷೇಪ, ನಕ್ಷೆ ವಿವಾದ… ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಅವರ ನೇಪಾಲ ಭೇಟಿ, ಉಭಯ ರಾಷ್ಟ್ರಗಳ ನಡುವಿನ ಈ ಎಲ್ಲ ವೈಮನಸ್ಸನ್ನು ಮುಚ್ಚಿಹಾಕುವ ನಿರೀಕ್ಷೆಯಿದೆ. ನ.4ರಂದು ಜ.ನರವಣೆ 3 ದಿನಗಳ ನೇಪಾಲ ಪ್ರವಾಸ ಕೈಗೊಳ್ಳಲಿದ್ದು, ಕಠ್ಮಂಡು ಕೆಂಪುಹಾಸಿನ ಸ್ವಾಗತ ನೀಡಲಿದೆ. ಮೊದಲ ದಿನ ಜ. ನರವಣೆ ಅವರಿಗೆ ಅಧ್ಯಕ್ಷೆ ಬಿದ್ಯಾದೇವಿ ಭಂಡಾರಿ “ನೇಪಾಲ ಸೇನಾ ಗೌರವ ಮುಖ್ಯಸ್ಥ’ ಪದವಿಯನ್ನು ಗೌರವಾರ್ಥ ಪ್ರಧಾನ ಮಾಡಲಿದ್ದಾರೆ. ಹೂಡಿಕೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ನೇಪಾಲ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಭೇಟಿ ಮಾಡಲಿದ್ದಾರೆ.

Advertisement

ಪಂಚೇಶ್ವರ ಮರುಜೀವ
ಭಾರತದ ಸಹ ಭಾಗಿತ್ವದಲ್ಲಿ ಮಹಾಕಾಳಿ ನದಿಗೆ ನಿರ್ಮಿಸುತ್ತಿರುವ ಪಂಚೇಶ್ವರ ವಿವಿಧೋದ್ದೇಶ ಯೋಜನೆಗೆ ಪುನರುಜ್ಜೀವ ಕೊಡಲು ಓಲಿ ಸರಕಾರ ಚಿಂತಿಸಿದೆ. ಯೋಜನೆ ಉಭಯ ತಾಂತ್ರಿಕ ತಂಡಗಳ ನಡುವೆ ಚರ್ಚೆಯ ಹಂತದಲ್ಲಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಠ್ಮಂಡು, ಭಾರತದಿಂದ ಹಲವು ಪ್ರಯೋಜನೆ ಪಡೆದಿದೆ. ಭವಿಷ್ಯದಲ್ಲಿ ಮತ್ತಷ್ಟು ಪ್ರಯೋಜನ ಗಳನ್ನು ನೇಪಾಲ ನಿರೀಕ್ಷಿಸುತ್ತಿದ್ದು, ಸೇನಾ ಮುಖ್ಯಸ್ಥ ಜ. ನರವಣೆ ಭೇಟಿ ನೇಪಾಲಕ್ಕೆ ಅಸಹನೆ ಸೃಷ್ಟಿಸಿದೆ.

ನೇಪಾಲದ ನಿರೀಕ್ಷೆಗಳೇನು?
ಹಿಮಾಲಯ ಶ್ರೇಣಿಯ ಮಕ್ಕಳಿಗೆ ಭಾರತದಲ್ಲಿ ಓದಲು ಮತ್ತಷ್ಟು ಸ್ಕಾಲರ್‌ಶಿಪ್‌ ವಿಸ್ತರಣೆ.
ತರಬೇತುಗೊಂಡ ವೈದ್ಯರ ಸೇವೆ, ತುರ್ತು ಔಷಧ ಪೂರೈಕೆ.
ಗಡಿನದಿಗಳ ಪ್ರವಾಹ ತಡೆಯಲು ಕ್ರಮ. ಗಡಿಗ್ರಾಮಗಳಿಗೆ ರಸ್ತೆ, ಸೇತುವೆಗಳ ನಿರ್ಮಾಣ.
ರಾಸಾಯನಿಕ ಗೊಬ್ಬರ
ಪೂರೈಕೆ ನಿರ್ಬಂಧ ತೆರವು.
ಗಡಿಯಲ್ಲಿ ವಲಸೆ
ಮತ್ತು ಕಸ್ಟಮ್ಸ್‌ ಸೌಲಭ್ಯಗಳನ್ನೊಳಗೊಂಡ ವ್ಯಾಪಾರ ಕೇಂದ್ರಗಳ ಸ್ಥಾಪನೆ.

Advertisement

Udayavani is now on Telegram. Click here to join our channel and stay updated with the latest news.

Next