Advertisement

ಭಾರತ ಅಭಿವೃದ್ಧಿಗೊಂಡ ದೇಶವಾಗಲು ದಶಕ ಸಾಕು!

06:00 AM Jun 14, 2018 | Team Udayavani |

ಮುಂಬೈ: ಅಭಿವೃದ್ಧಿಗೊಳ್ಳುತ್ತಿರುವ ದೇಶ ಎಂಬ ಹಣೆಪಟ್ಟಿಯಿಂದ ಅಭಿವೃದ್ಧಿಗೊಂಡ ದೇಶ ಎಂಬ ಹೆಗ್ಗಳಿಕೆ ಪಡೆಯಲು ಭಾರತಕ್ಕೆ ಇನ್ನು ಒಂದೇ ದಶಕ ಸಾಕು. ಆದರೆ ಇದಕ್ಕಾಗಿ ಶಿಕ್ಷಣದ ಮೇಲೆ ಗಮನ ಹರಿಸಬೇಕಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸಂಶೋಧನಾ ವಿಭಾಗ ಪ್ರಕಟಿಸಿದ ವರದಿ ತಿಳಿಸಿದೆ. 

Advertisement

ಒಂದು ವೇಳೆ ಶಿಕ್ಷಣದ ಮೇಲೆ ಗಮನ ಹರಿಸದಿದ್ದರೆ, 2030ರ ವೇಳೆ ಜನಸಂಖ್ಯೆಯೇ ಭಾರತಕ್ಕೆ ಸಮಸ್ಯಾತ್ಮಕವಾಗಲಿದೆ. ಎಂದಿಗೂ ದೇಶ ಅಭಿವೃದ್ಧಿಗೊಂಡ ದೇಶಗಳ ಗುಂಪಿಗೆ ಸೇರಲಾಗದು. ಸದ್ಯ ಕೇವಲ ಒಂದು ದಶಕದ ಅವಧಿ ಭಾರತಕ್ಕಿದೆ. ಇದಕ್ಕೆ ಸರ್ಕಾರ ಮತ್ತು ನೀತಿ ನಿರೂಪಕರು ಕಾರ್ಯಪ್ರವೃತ್ತವಾಗಿ, ಯುವ ಜನಾಂಗದ ಮೇಲೆ ಗಮನ ಹರಿಸಬೇಕಿದೆ ಎಂದಿದೆ.

ಅಷ್ಟೇ ಅಲ್ಲದೆ, ಕಳೆದ ಎರಡು ದಶಕಗಳಲ್ಲಿ ಜನಸಂಖ್ಯೆ ಬೆಳವಣಿಗೆಯ ಗತಿ ಕುಂಠಿತಗೊಂಡಿದೆ. ಕರ್ನಾಟಕದಲ್ಲಿ ಜನನ ಪ್ರಮಾಣ ಇಳಿಕೆ ಗತಿಯಲ್ಲಿದೆ. ಹೀಗಾಗಿ ಪಾಲಕರು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಸರ್ಕಾರಿ ಶಾಲೆಗಳ ಬದಲಿಗೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸ ಬೇಕಿದ್ದು, ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಅನುದಾನ ನೀಡುವುದರ ಬದಲಿಗೆ ಅದೇ ಮೊತ್ತ ವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬೇಕು ಎಂದು ವರದಿಯಲ್ಲಿ ಸಲಹೆ ಮಾಡಲಾಗಿದೆ. ಅಲ್ಲದೆ ಇಂಗ್ಲಿಷ್‌ಅನ್ನು ಬೋಧನೆಯ  ಮಾಧ್ಯಮವನ್ನಾಗಿಸಿ, ಅರ್ಹ ಶಿಕ್ಷಕರಿಗೆ ಉತ್ತಮ ವೇತನ ನೀಡಬೇಕು ಮತ್ತು ಅವರನ್ನು ಜನಗಣತಿಯಂತಹ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಜನರೇ ಸ್ವತ್ತು ಎಂದ ಭಾರ ತೀಯ ಸ್ಟೇಟ್‌ ಬ್ಯಾಂಕ್‌ ಸಂಶೋಧನಾ ವರದಿ
ಶಿಕ್ಷಣ ಸರಿಯಾಗಿಲ್ಲದಿದ್ದರೆ 2030ರಲ್ಲಿ ಸಮಸ್ಯೆ ಸೃಷ್ಟಿ
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗಾಗಿ ಅನುದಾನ ಸದ್ಬಳಕೆಗೆ ಸಲಹೆ

Advertisement

Udayavani is now on Telegram. Click here to join our channel and stay updated with the latest news.

Next