ಹೊಸದಿಲ್ಲಿ: ಬೆಲ್ಜಿಯಂ ಮತ್ತು ನೆದರ್ಲೆಂಡ್‌ನಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಎಫ್ಐಎಚ್ ಪ್ರೊ ಲೀಗ್‌ನ ಯುರೋಪಿಯನ್ ಲೆಗ್‌ನಲ್ಲಿ ಭಾಗವಹಿಸಲು ಸವಿತಾ ಪೂನಿಯಾ ನೇತೃತ್ವದ 24 ಸದಸ್ಯರ ಭಾರತೀಯ ವನಿತಾ ಹಾಕಿ ತಂಡವನ್ನು ಹೆಸರಿಸಲಾಗಿದೆ.
ಎಫ್ಐಎಚ್ ಹಾಕಿ ವನಿತಾ ವಿಶ್ವಕಪ್‌ಗಿಂತ ಮುಂಚಿತವಾಗಿ ನಡೆಯಲಿರುವ ಈ ಕೂಟದಲ್ಲಿ ಭಾರತೀಯ ತಂಡವು ಜೂನ್ 11ರಿಂದ 22ರ ವರೆಗೆ ಆರು ಪಂದ್ಯಗಳನ್ನು ಆಡಲಿದೆ. ಹಾಕಿ ವನಿತಾ ವಿಶ್ವಕಪ್ ಜುಲೈ 1ರಿಂದ 17ರ ವರೆಗೆ ಸ್ಪೇನ್ ಮತ್ತು ನೆದರ್ಲೆಂಡ್‌ನಲ್ಲಿ ನಡೆಯಲಿದೆ.
ಆಂಟೆರ್ಪ್‌ನಲ್ಲಿ ಜೂ. 11 ಮತ್ತು 12ರಂದು ನಡೆಯುವ ಪಂದ್ಯದಲ್ಲಿ ಭಾರತವು ಬೆಲ್ಜಿಯಂ ವಿರುದ್ಧ ಆಡಲಿದೆ. ಆಬಳಿಕ ಆರ್ಜೆಂಟೀನಾ (ಜೂ. 18 ಮತ್ತು 19) ಮತ್ತು ಅಮೆರಿಕ (ಜೂ. 21 ಮತ್ತು 22) ವನ್ನು ಎದುರಿಸಲು ನೆದರ್ಲೆಂಡಿನ ರೋಟರ್‌ಡಮ್‌ಗೆ ತೆರಳಲಿದೆ.
ಕಳೆದ ವರ್ಷದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೊನೆಯದಾಗಿ ಆಡಿದ್ದ ಸ್ಟಾರ್ ಹೊಡೆತಗಾರ್ತಿ ರಾಣಿ ರಾಂಪಾಲ್ ಅವರು ಈ ಕೂಟಕ್ಕಾಗಿ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಆದರೂ ಸವಿತಾ ತಂಡವನ್ನು ಮುನ್ನಡೆಸಲಿದ್ದಾರೆ.
ಮಂಡಿ ನೋವಿನಿಂದ ಬಳಲುತ್ತಿರುವ ರಾಣಿ ಪುನ ಶ್ಚೇತನ ಶಿಬಿರದಲ್ಲಿದ್ದಾರೆ. ಅವರನ್ನು ನೆದರ್ಲೆಂಡ್ ವಿರುದ್ಧ ಭುವನೇಶ್ವರದಲ್ಲಿ ನಡೆದ ಕಳೆದ ಎರಡು ಎಫ್ಐಎಚ್ ಪ್ರೊ ಲೀಗ್ ಪಂದ್ಯಗಳಿಗೆ ತಂಡದಲ್ಲಿ ಹೆಸರಿಸಲಾಗಿತ್ತು. ಆದರೆ ಅವರು ಪಂದ್ಯದಲ್ಲಿ ಆಡಿರಲಿಲ್ಲ.
ದೀಪ್ ಗ್ರೇಸ್ ಉಪನಾಯಕಿ
ಅನುಭವಿ ಡಿಫೆಂಡರ್ ದೀಪ್ ಗ್ರೇಸ್ ಎಕ್ಕ ತಂಡದ ಉಪ ನಾಯಕಿಯಾಗಿ ಕರ್ತವ್ಯ ನಿರ್ವ ಹಿಸಲಿದ್ದಾರೆ. ಜೂನಿಯರ್ ವಿಶ್ವಕಪ್ ತಾರೆಯರಾದ ಬಿಚು ದೇವಿ ಖರೀಬಮ್, ಇಶಿಕಾ ಚೌಧರಿ, ಅಕ್ಷತಾ ಅಬಸೊ ದೇಖಲೆ, ಬಲ್‌ಜೀತ್ ಕೌರ್, ಸಂಗೀತಾ ಕುಮಾರಿ ಮತ್ತು ದೀಪಿಕಾ ತಂಡದಲ್ಲಿದ್ದಾರೆ.