Advertisement

ಇನ್ನು ದೇಶಾದ್ಯಂತ ತಿಂಗಳಲ್ಲಿ ಒಂದೇ ದಿನ ವೇತನ ನೀಡಿಕೆ?

09:45 AM Nov 16, 2019 | Team Udayavani |

ಹೊಸದಿಲ್ಲಿ: ಹಲವು ಕಾನೂನು ಕಟ್ಟಳೆಗಳು, ಯೋಜನೆಗಳಲ್ಲಿ ಬದಲಾವಣೆಗಳನ್ನು ತರುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಇನ್ನೊಂದು ಮಹತ್ವದ ಬದಲಾವಣೆಗೆ ಉದ್ದೇಶಿಸಿದೆ. ಒಂದು ವೇಳೆ ಈ ನಿಯಮ ಜಾರಿ ಯಾಗಿದ್ದೇ ಆದಲ್ಲಿ ದೇಶಾದ್ಯಂತ ಸಂಘಟಿತ ವಲಯದ ಎಲ್ಲ ಕಾರ್ಮಿಕರು ಒಂದೇ ದಿನ ವೇತನ ಪಡೆದುಕೊಳ್ಳಲಿದ್ದಾರೆ. ಹೀಗೆ ತಿಂಗಳ ನಿರ್ದಿಷ್ಟ ದಿನದಂದು ದೇಶಾದ್ಯಂತ ವೇತನ ನೀಡುವ “ಒಂದು ದೇಶ ಒಂದೇ ದಿನ ವೇತನ’ ಕಾಯ್ದೆಯನ್ನು ಜಾರಿಗೆ ತರಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಕಾಮಿರ್ಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

Advertisement

ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ, ಎಲ್ಲಾ ವಲಯಗಳು ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುವಂತೆ ಮಾಡುವುದು ಇದರ ಉದ್ದೇಶ. ಶೀಘ್ರ ಈ ಕಾಯ್ದೆ ಜಾರಿಗೊಳಿಸಲು ಪ್ರಧಾನಿ ಉತ್ಸುಕರಾಗಿದ್ದಾರೆ. ಇದೇ ರೀತಿ ಎಲ್ಲ ಕಾರ್ಮಿಕರಿಗೆ ಅನ್ವಯವಾಗುವಂತೆ ಎಲ್ಲ ವಲಯಗಳು ಅಡಕಗೊಳ್ಳುವಂತೆ ಕನಿಷ್ಠ ವೇತನವನ್ನೂ ಜಾರಿಗೊಳಿಸಲಾಗುವುದು ಎಂದವರು ಹೇಳಿದರು.

ಇದರೊಂದಿಗೆ ಔದ್ಯೋಗಿಕ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಕುರಿತ ಕಾಯ್ದೆ, ವೇತನ ಕಾಯ್ದೆ ಕೂಡ ಜಾರಿಗೊಳಿಸಲಾಗುವುದು ಎಂದರು. ವೇತನ ಬಗ್ಗೆ ಕಾಯ್ದೆ ಈಗಾಗಲೇ ಸಂಸತ್ತಿನಲ್ಲಿ ಪಾಸು ಮಾಡಲಾಗಿದೆ. ಇದನ್ನು ಜಾರಿಗೊಳಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next