Advertisement

UNDP ಪಟ್ಟಿ ಭಾರತದ ಸ್ಥಾನ ಏರಿಕೆ

12:03 PM Sep 15, 2018 | Karthik A |

ಹೊಸದಿಲ್ಲಿ: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಪಟ್ಟಿಯಲ್ಲಿ (ಯುಎನ್‌ಡಿಪಿ) ಭಾರತದ ರ್‍ಯಾಂಕಿಂಗ್‌ 131ರಿಂದ 130ಕ್ಕೆ ಏರಿಕೆಯಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಸಂಬಂಧಿಸಿದಂತೆ 189 ರಾಷ್ಟ್ರಗಳ ಪೈಕಿ ನಮ್ಮ ದೇಶದ ಸ್ಥಾನ 1 ಸ್ಥಾನದಷ್ಟು ವೃದ್ಧಿಯಾಗಿದೆ. ದಕ್ಷಿಣ ಏಷ್ಯಾ ವಲಯಕ್ಕೆ ಸಂಬಂಧಿಸಿ 0.638ರಷ್ಟು ಸೂಚ್ಯಂಕ ಹೊಂದಿದೆ. 

Advertisement

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಇದೇ ಮಾದರಿಯ ಜನಸಂಖ್ಯೆಯನ್ನು ಹೊಂದಿದ್ದು, ಕ್ರಮವಾಗಿ 136 ಮತ್ತು 150ನೇ ರ್‍ಯಾಂಕ್‌ ಪಡೆದಿವೆ. ಬಡತನದಿಂದ ಗಣನೀಯ ಪ್ರಮಾಣದಲ್ಲಿನ ಜನರು ಹೊರಬಂದದ್ದು ಸೂಚ್ಯಂಕದಲ್ಲಿ ಶೇ.50ರಷ್ಟು ವೃದ್ಧಿಯಾಗಲು ಕಾರಣವಾಯಿತು ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next