Advertisement

ಮೇಡ್ ಇನ್ ಇಂಡಿಯಾ ಕೋವಿಡ್ 19 ಲಸಿಕೆ ಫೆಬ್ರವರಿಯಲ್ಲಿ ಲಭ್ಯ? ಯಾವುದು ಈ ಲಸಿಕೆ

03:28 PM Nov 05, 2020 | Nagendra Trasi |

ನವದೆಹಲಿ:ಭಾರತ ಸರ್ಕಾರ ಪ್ರಾಯೋಜಕತ್ವದ ಕೋವಿಡ್ 19 ಸೋಂಕಿನ ಲಸಿಕೆ 2021ನೇ ಇಸವಿಯ ಫೆಬ್ರುವರಿಯ ಆರಂಭದಲ್ಲಿ ಲಭ್ಯವಾಗುವ ಸಾಧ್ಯತೆಗಳಿರುವುದಾಗಿ ವರದಿ ತಿಳಿಸಿದೆ. ನಿರೀಕ್ಷೆಗಿಂತ ಒಂದು ತಿಂಗಳ ಮುನ್ನವೇ ಕೋವಿಡ್ ಲಸಿಕೆ ಲಭಿಸುವ ಸಾಧ್ಯತೆ ಇದೆ. ಅಂತಿಮ ಹಂತದ ಪ್ರಯೋಗದಲ್ಲಿ ಈ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬ ಅಂಶ ಕಂಡುಬಂದಿರುವುದಾಗಿ ಸರ್ಕಾರದ ಹಿರಿಯ ವಿಜ್ಞಾನಿ ರಾಯಿಟರ್ಸ್ ಗೆ ತಿಳಿಸಿದ್ದಾರೆ.

Advertisement

ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಜತೆಗೂಡಿ ಖಾಸಗಿ ಕಂಪನಿಯಾದ ಭಾರತ್ ಬಯೋಟೆಕ್ “ಕೋವ್ಯಾಕ್ಸಿನ್” ಲಸಿಕೆಯನ್ನು ಅಭಿವೃದ್ದಿಪಡಿಸಿದ್ದು, ಈ ಲಸಿಕೆ 2021ರ ಏಪ್ರಿಲ್ ನಂತರ ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿತ್ತು.

ಕೋವಿಡ್ ಗಾಗಿ ಸಿದ್ಧಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ತುಂಬಾ ಪರಿಣಾಮಕಾರಿ ಫಲಿತಾಂಶ ಕಂಡು ಬಂದಿರುವುದಾಗಿ ಐಸಿಎಂಆರ್ ವಿಜ್ಞಾನಿ ರಜನಿಕಾಂತ್ ತಿಳಿಸಿದ್ದು, ರಜನಿಕಾಂತ್ ಕೋವಿಡ್ 19 ಟಾಸ್ಕ್ ಫೋರ್ಸ್ ನ ಸದಸ್ಯರಾಗಿದ್ದಾರೆ.

ಇದನ್ನೂ ಓದಿ:ಪ್ರವಾಸಿಗರ ಸೋಗಿನಲ್ಲಿ ಖೋಟಾ ನೋಟು ಚಲಾವಣೆ! ಪೊಲೀಸರಿಂದ ತಂದೆ, ತಾಯಿ, ಮಗನ ಬಂಧನ

ಈ ನೂತನ ಲಸಿಕೆ ಮುಂದಿನ ವರ್ಷ(2021)ದ ಫೆಬ್ರುವರಿ ಅಥವಾ ಮಾರ್ಚ್ ನಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ ಈ ಬಗ್ಗೆ ಭಾರತ್ ಬಯೋಟೆಕ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.

Advertisement

ಒಂದು ವೇಳೆ ಫೆಬ್ರುವರಿಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆಯಾದರೆ ಮೇಡ್ ಇನ್ ಇಂಡಿಯಾದ ಮೊದಲ ಲಸಿಕೆ ಲಭ್ಯವಾದಂತಾಗಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next