Advertisement

ಸ್ಪೇನ್‌ಗೆ ಸೋತ ಭಾರತ

12:03 AM Jul 27, 2023 | Team Udayavani |

ಟೆರ್ರಾಸ್ಸ (ಸ್ಪೇನ್‌): ಆಕ್ರಮಣಕಾರಿ ಆಟದ ಹೊರತಾಗಿಯೂ ಆತಿಥೇಯ ಸ್ಪೇನ್‌ ಎದುರಿನ ಹಾಕಿ ಪಂದ್ಯದಲ್ಲಿ ಭಾರತ 1-2 ಅಂತರದ ಸೋಲನುಭವಿಸಿದೆ. ಸ್ಪೇನ್‌ ಹಾಕಿ ಫೆಡರೇಶನ್‌ ಶತಮಾನೋತ್ಸವ ಅಂಗವಾಗಿ ಈ ಸರಣಿ ನಡೆಯುತ್ತಿದೆ.

Advertisement

ಪೌಲ್‌ ಕ್ಯುನಿಲ್‌ 11ನೇ ನಿಮಿಷದಲ್ಲೇ ಗೋಲು ಬಾರಿಸಿ ಸ್ಪೇನ್‌ಗೆ ಮುನ್ನಡೆ ಒದಗಿಸಿದರು. ಜೋಕ್ವಿನ್‌ ಮೆನಿನಿ 33ನೇ ನಿಮಿಷದಲ್ಲಿ 2ನೇ ಗೋಲು ಹೊಡೆದರು. 2 ಗೋಲುಗಳ ಹಿನ್ನಡೆಯ ಬಳಿಕವೂ ಸ್ಪೇನ್‌ ಮೇಲೆ ಭಾರತ ಒತ್ತಡ ಹೇರುತ್ತ ಹೋಯಿತು. ಈ ಅವಧಿಯಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವೊಂದನ್ನು ವ್ಯರ್ಥಗೊಳಿಸಿತು. ಕೊನೆಗೂ ಪಂದ್ಯದ ಮುಕ್ತಾಯಕ್ಕೆ ಒಂದು ನಿಮಿಷ ಉಳಿದಿರುವಾಗ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಗೋಲೊಂದನ್ನು ಬಾರಿಸಲು ಯಶಸ್ವಿಯಾದರು.
ಭಾರತದ ಮುಂದಿನ ಎದುರಾಳಿ ನೆದರ್ಲೆಂಡ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next