Advertisement

ಇಂಗ್ಲೆಂಡ್‌ ಅಬ್ಬರ; ಆರೆಂಜ್‌ ಬಾಯ್ಸ್ ತತ್ತರ

12:08 PM Jul 02, 2019 | Team Udayavani |

ಬರ್ಮಿಂಗ್‌ಹ್ಯಾಮ್‌: ರವಿವಾರದ ದೊಡ್ಡ ಮೊತ್ತದ ಎಜ್‌ಬಾಸ್ಟನ್‌ ಹೋರಾಟದಲ್ಲಿ ಭಾರತವನ್ನು 31 ರನ್ನುಗಳಿಂದ ಮಣಿಸಿದ ಇಂಗ್ಲೆಂಡ್‌ ವಿಶ್ವಕಪ್‌ ಸೆಮಿಪೈನಲ್‌ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ಇದರಿಂದ ಸೆಮಿ ಕನಸು ಕಾಣುತ್ತಿದ್ದ ಉಳಿದ ಕೆಲವು ತಂಡಗಳಿಗೆ ಹಿನ್ನಡೆಯಾಗಿದೆ.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 7 ವಿಕೆಟಿಗೆ 337 ರನ್‌ ಪೇರಿಸಿದರೆ, ಕಿತ್ತಳೆ ಜೆರ್ಸಿಯಲ್ಲಿ ಕಣಕ್ಕಿಳಿದ ಭಾರತ 5 ವಿಕೆಟಿಗೆ 306 ಮಾಡಿತು. ಇದು ಪ್ರಸಕ್ತ ಪಂದ್ಯಾವಳಿಯಲ್ಲಿ ಟೀಮ್‌ ಇಂಡಿಯಾಕ್ಕೆ ಎದುರಾದ ಮೊದಲ ಸೋಲು.

ಚೇಸಿಂಗ್‌ ವೇಳೆ ಆರಂಭಕಾರ ರೋಹಿತ್‌ ಶರ್ಮ ಆಕರ್ಷಕ ಶತಕ ಬಾರಿಸಿ ಮಿಂಚಿದರು. ಅವರ ಗಳಿಕೆ 109 ಎಸೆತಗಳಿಂದ 102 ರನ್‌ (15 ಬೌಂಡರಿ). ಕೊಹ್ಲಿ 66, ಪಾಂಡ್ಯ 45, ಧೋನಿ ಅಜೇಯ 42 ರನ್‌ ಮಾಡಿದರು.

ಇಂಗ್ಲೆಂಡ್‌ ಆರಂಭಿಕರಾದ ಜಾನಿ ಬೇರ್‌ಸ್ಟೊ ಮತ್ತು ಜಾಸನ್‌ ರಾಯ್‌ ಸೇರಿಕೊಂಡು ಆರಂಭದಿಂದಲೇ ಭಾರತದ ಬೌಲಿಂಗ್‌ ದಾಳಿ ಯನ್ನು ಪುಡಿಗುಟ್ಟಿದರು. ಬೌಂಡರಿ, ಸಿಕ್ಸರ್‌ ಸರಾಗವಾಗಿ ಹರಿದುಬರತೊಡಗಿತು.
ಮೊಹಮ್ಮದ್‌ ಶಮಿ ಸತತ 3ನೇ ಪಂದ್ಯದಲ್ಲೂ ಮಿಂಚುವ ಮೂಲಕ ಭಾರತದ ಬೌಲಿಂಗಿಗೆ ಒಂದಿಷ್ಟು ಗೌರವ ತಂದಿತ್ತರು. ಶಮಿ ಸಾಧನೆ 69ಕ್ಕೆ 5 ವಿಕೆಟ್‌. ಹಿಂದಿನೆರಡೂ ಪಂದ್ಯಗಳಲ್ಲಿ ಅವರು ತಲಾ 4 ವಿಕೆಟ್‌ ಉರುಳಿಸಿದ್ದರು.

ಶಮಿ ಹೊರತುಪಡಿಸಿದರೆ ಆಂಗ್ಲರಿಗೆ ಕಡಿವಾಣ ಹಾಕಿದ ಮತ್ತೂಬ್ಬ ಬೌಲರ್‌ ಜಸ್‌ಪ್ರೀತ್‌ ಬುಮ್ರಾ. ಅವರ 10 ಓವರ್‌ಗಳಲ್ಲಿ ಕೇವಲ 44 ರನ್‌ ನೀಡಿದರು. ಆದರೆ ಹಾರ್ದಿಕ್‌ ಪಾಂಡ್ಯ, ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌ ಬಹಳ ದುಬಾರಿಯಾದರು. ಇಂಗ್ಲೆಂಡ್‌ ಸರದಿಯಲ್ಲಿ ಒಟ್ಟು 27 ಬೌಂಡರಿ, 13 ಸಿಕ್ಸರ್‌ ಸಿಡಿಯಲ್ಪಟ್ಟಿತು. ಇದರಲ್ಲಿ 12 ಬೌಂಡರಿ ಹಾಗೂ 9 ಸಿಕ್ಸರ್‌ಗಳನ್ನು ಸ್ಪಿನ್ನರ್‌ಗಳೇ ಬಿಟ್ಟುಕೊಟ್ಟರು.

Advertisement

ಮೊದಲ ವಿಕೆಟಿಗೆ ದಾಖಲೆ
ಜಾನಿ ಬೇರ್‌ಸ್ಟೊ ಶತಕ ಬಾರಿಸಿದರೆ, ವಿಶ್ರಾಂತಿಯ ಬಳಿಕ ಮರಳಿದ ಜಾಸನ್‌ ರಾಯ್‌ ಅರ್ಧ ಶತಕದೊಂದಿಗೆ ಮಿಂಚಿದರು. ಇವರಿಬ್ಬರು ಕೇವಲ 22.1 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 160 ರನ್‌ ಪೇರಿಸಿದಾಗಲೇ ಬೃಹತ್‌ ಮೊತ್ತದ ಸೂಚನೆ ಲಭಿಸಿತ್ತು. ಇದು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಮೊದಲ ವಿಕೆಟಿಗೆ ಒಟ್ಟುಗೂಡಿದ ಅತ್ಯಧಿಕ ರನ್‌ ದಾಖಲೆಯಾಗಿದೆ. ಹಿಂದಿನ ದಾಖಲೆ ವೆಸ್ಟ್‌ ಇಂಡೀಸಿನ ಗಾರ್ಡನ್‌ ಗ್ರೀನಿಜ್‌-ಡೆಸ್ಮಂಡ್‌ ಹೇನ್ಸ್‌ ಹೆಸರಲ್ಲಿತ್ತು. ಇವರು 1979ರಲ್ಲಿ ಇದೇ ಅಂಗಳದಲ್ಲಿ ಮೊದಲ ವಿಕೆಟಿಗೆ 138 ರನ್‌ ಒಟ್ಟುಗೂಡಿಸಿದ್ದರು. ಇದರೊಂದಿಗೆ 40 ವರ್ಷಗಳಷ್ಟು ಪುರಾತನ ದಾಖಲೆಯನ್ನು ಇಂಗ್ಲೆಂಡ್‌ ಆರಂಭಿಕರು ಮುರಿದಂತಾಯಿತು.

32ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಭರ್ಜರಿ ಬ್ಯಾಟಿಂಗ್‌ ಮೂಲಕ ಮೆರೆದಾಡಿದ ಬೇರ್‌ಸ್ಟೊ 109 ಎಸೆತ ಎದುರಿಸಿ 111 ರನ್‌ ಬಾರಿಸಿದರು. ಸಿಡಿಸಿದ್ದು 10 ಬೌಂಡರಿ ಹಾಗೂ 6 ಸಿಕ್ಸರ್‌. ಜಾಸನ್‌ ರಾಯ್‌ ಗಳಿಕೆ 57 ಎಸೆತಗಳಿಂದ 66 ರನ್‌. ಇದರಲ್ಲಿ 7 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು.
ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಜೋ ರೂಟ್‌ ಅಷ್ಟೇನೂ ಬಿರುಸಿನ ಆಟಕ್ಕಿಳಿಯಲಿಲ್ಲ. ಅವರ 44 ರನ್‌ 54 ಎಸೆತಗಳಿಂದ ಬಂತು. ನಾಯಕ ಇಯಾನ್‌ ಮಾರ್ಗನ್‌ ಒಂದೇ ರನ್ನಿಗೆ ನಿರ್ಗಮಿಸಿದರು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜಾಸನ್‌ ರಾಯ್‌ ಸಿ ಜಡೇಜ (ಬದಲಿ) ಬಿ ಕುಲದೀಪ್‌ 66
ಜಾನಿ ಬೇರ್‌ಸ್ಟೊ ಸಿ ಪಂತ್‌ ಬಿ ಶಮಿ 111
ಜೋ ರೂಟ್‌ ಸಿ ಪಾಂಡ್ಯ ಬಿ ಶಮಿ 44
ಇಯಾನ್‌ ಮಾರ್ಗನ್‌ ಸಿ ಜಾಧವ್‌ ಬಿ ಶಮಿ 1
ಬೆನ್‌ ಸ್ಟೋಕ್ಸ್‌ ಸಿ ಜಡೇಜ ಬಿ ಬುಮ್ರಾ 79
ಜಾಸ್‌ ಬಟ್ಲರ್‌ ಸಿ ಮತ್ತು ಬಿ ಶಮಿ 20
ಕ್ರಿಸ್‌ ವೋಕ್ಸ್‌ ಸಿ ರೋಹಿತ್‌ ಬಿ ಶಮಿ 7
ಲಿಯಮ್‌ ಪ್ಲಂಕೆಟ್‌ ಔಟಾಗದೆ 1
ಜೋಫ‌Å ಆರ್ಚರ್‌ ಔಟಾಗದೆ 0
ಇತರ 8
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 337
ವಿಕೆಟ್‌ ಪತನ: 1-160, 2-205, 3-207, 4-277, 5-310, 6-319, 7-336.
ಬೌಲಿಂಗ್‌:

ಮೊಹಮ್ಮದ್‌ ಶಮಿ 10-1-69-5
ಜಸ್‌ಪ್ರೀತ್‌ ಬುಮ್ರಾ 10-1-44-1
ಯಜುವೇಂದ್ರ ಚಹಲ್‌ 10-0-88-0
ಹಾರ್ದಿಕ್‌ ಪಾಂಡ್ಯ 10-0-60-0
ಕುಲದೀಪ್‌ ಯಾದವ್‌ 10-0-72-1

ಭಾರತ
ಕೆ.ಎಲ್‌. ರಾಹುಲ್‌ ಸಿ ಮತ್ತು ಬಿ ವೋಕ್ಸ್‌ 0
ರೋಹಿತ್‌ ಶರ್ಮ ಸಿ ಬಟ್ಲರ್‌ ಬಿ ವೋಕ್ಸ್‌ 102
ವಿರಾಟ್‌ ಕೊಹ್ಲಿ ಸಿ ವಿನ್ಸ್‌ (ಬದಲಿ) ಬಿ ಪ್ಲಂಕೆಟ್‌ 66
ರಿಷಭ್‌ ಪಂತ್‌ ಸಿ ವೋಕ್ಸ್‌ ಬಿ ಪ್ಲಂಕೆಟ್‌ 32
ಹಾರ್ದಿಕ್‌ ಪಾಂಡ್ಯ ಸಿ ವಿನ್ಸ್‌ ಬಿ ಪ್ಲಂಕೆಟ್‌ 45
ಎಂ.ಎಸ್‌. ಧೋನಿ ಔಟಾಗದೆ 42
ಕೇದಾರ್‌ ಜಾಧವ್‌ ಔಟಾಗದೆ 12
ಇತರ 7
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 306
ವಿಕೆಟ್‌ ಪತನ: 1-8, 2-146, 3-198, 4-226, 5-267.
ಬೌಲಿಂಗ್‌:

ಕ್ರಿಸ್‌ ವೋಕ್ಸ್‌ 10-3-58-2
ಜೋಫ‌Å ಆರ್ಚರ್‌ 10-0-45-0
ಲಿಯಮ್‌ ಪ್ಲಂಕೆಟ್‌ 10-0-55-3
ಮಾರ್ಕ್‌ ವುಡ್‌ 10-0-73-0
ಆದಿಲ್‌ ರಶೀದ್‌ 6-0-40-0
ಬೆನ್‌ ಸ್ಟೋಕ್ಸ್‌ 4-0-34-0

ಪಂದ್ಯಶ್ರೇಷ್ಠ: ಜಾನಿ ಬೇರ್‌ಸ್ಟೊ

Advertisement

Udayavani is now on Telegram. Click here to join our channel and stay updated with the latest news.

Next