ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 28,326 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಶನಿವಾರ ವರದಿಯಾದ ಸೋಂಕು ಪ್ರಕರಣಗಳಿಗಿಂತ ರವಿವಾರ ಶೇ. 4.4 ಕಡಿಮೆ ಪ್ರಕರಣಗಳು ಪತ್ತೆಯಾಗಿದೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,35,31,498 ಗೆ ಏರಿಕೆಯಾಗಿದೆ.
ಈ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 260 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 4,46,918 ಗೆ ಏರಿಕೆಯಾಗಿದೆ.
ಕೇರಳ ರಾಜ್ಯದಲ್ಲಿ 16,671 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 3,276 ಪ್ರಕರಣಗಳು, ತಮಿಳುನಾಡು ರಾಜ್ಯದಲ್ಲಿ 1,724 ಪ್ರಕರಣಗಳು, ಮಿಜೋರಾಂನಲ್ಲಿ 1,478 ಪ್ರಕರಣಗಳು ಮತ್ತು ಆಂಧ್ರಪ್ರದೇಶ ರಾಜ್ಯದಲ್ಲಿ 1,167 ಪ್ರಕರಣಗಳು ಪತ್ತೆಯಾಗಿದೆ.
ಇದನ್ನೂ ಓದಿ:ಶೀಘ್ರ ಪ್ರಮುಖ ಕಚೇರಿಗಳು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ: ಸಿಎಂ ಬೊಮ್ಮಾಯಿ
ಈ ಐದು ರಾಜ್ಯಗಳಿಂದ ಸುಮಾರು 85.85 ಪ್ರತಿಶತ ಹೊಸ ಪ್ರಕರಣಗಳು ವರದಿಯಾಗಿವೆ. ಕೇರಳ ರಾಜ್ಯವೊಂದರಲ್ಲೇ ಶೇ. 58.85 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ 26,032 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ ದೇಶದಲ್ಲಿ 3,29,02,351 ಮಂದಿ ಕೋವಿಡ್ ಸೋಂಕಿತರು ಗುಣಮುಖ ಹೊಂದಿದ್ದಾರೆ.