Advertisement

2029ಕ್ಕೆ ಭಾರತ ಜಗತ್ತಿನ 3ನೇ ಅರ್ಥ ವ್ಯವಸ್ಥೆ- ಎಸ್‌ಬಿಐ ಸಂಶೋಧನ ವರದಿಯಲ್ಲಿ ಉಲ್ಲೇಖ

10:23 PM Sep 04, 2022 | Team Udayavani |

ಹೊಸದಿಲ್ಲಿ: ಇಸವಿ 2029ರ ಒಳಗೆ ಭಾರತವು ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 2014ನೇ ಸಾಲಿಗೆ ಹೋಲಿಸಿದರೆ ದೇಶಕ್ಕೆ ಏಳು ಸ್ಥಾನಗಳಷ್ಟು ಪದೋನ್ನತಿ ಸಿಗಲಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಆರ್ಥಿಕ ಸಂಶೋಧನ ವಿಭಾಗದ ಅಧ್ಯಯನ ವರದಿ ಹೇಳಿದೆ.

Advertisement

ಬ್ರಿಟನನ್ನು ಮೀರಿಸಿ ಭಾರತವು ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಗಳಿಸಿರುವುದಾಗಿ “ಬ್ಲೂಮ್‌ಬರ್ಗ್‌’ ವರದಿ ಮಾಡಿದ ಬೆನ್ನಲ್ಲೇ ಈ ಹೊಸ ವರದಿ ಹೊರಬಿದ್ದಿದೆ.

ಇಡೀ ಜಗತ್ತು ಆರ್ಥಿಕ ಹಿಂಜರಿತದ ಭೀತಿಗೆ ಒಳಗಾಗಿದ್ದರೆ ಭಾರತದ ಆರ್ಥಿಕತೆ ಮಾತ್ರ ಪ್ರಬಲವಾಗಿ ಮುಂದಡಿಯಿಡುತ್ತಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ, ಆದಾಯದ ವೆಚ್ಚ ತಗ್ಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ, ದೇಶದ ಆರ್ಥಿಕತೆಯು ಸಮತೋಲಿತವಾಗಿ ಬೆಳೆಯುತ್ತಿದೆ.

ಪರಿಣಾಮವಾಗಿ 2029ರ ವೇಳೆಗೆ ಭಾರತವು ವಿಶ್ವದಲ್ಲೇ 3ನೇ ಅತೀ ದೊಡ್ಡ ಆರ್ಥಿಕತೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎಂದೂ ಎಸ್‌ಬಿಐ ವರದಿ ಹೇಳಿದೆ.

ಜತೆಗೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಪ್ರಮಾಣ ಶೇ. 6ರಿಂದ ಶೇ. 6.5ರ ನಡುವೆ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ ಎಂದೂ ಅಭಿಪ್ರಾಯಪಟ್ಟಿದೆ.

Advertisement

ಚೀನವನ್ನು ಹಿಂದಿಕ್ಕಲಿದೆ
ಹಲವು ಕಾರಣಗಳಿಂದಾಗಿ ಚೀನದ ಅರ್ಥ ವ್ಯವಸ್ಥೆ ಬಿಕ್ಕಟ್ಟಿನಲ್ಲಿದೆ. ಇದು ಭಾರತಕ್ಕೆ ಅನುಕೂಲವಾಗಿ ಪರಿಣಮಿಸಲಿದೆ ಮತ್ತು ಡ್ರ್ಯಾಗನ್‌ನ ಜಿಡಿಪಿಗಿಂತ ಭಾರತದ ಜಿಡಿಪಿ ವೃದ್ಧಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಚೀನದಲ್ಲಿ ಉತ್ಪಾದನೆಯಾಗಲಿರುವ ಐಫೋನ್‌ 14ನ್ನು ಭಾರತದಲ್ಲಿ ಮುಂದುವರಿಸಲು ಆ್ಯಪಲ್‌ ನಿರ್ಧರಿಸಿರುವುದು ಚೀನದ ಬಿಕ್ಕಟ್ಟಿನಿಂದ ಭಾರತಕ್ಕೆ ಲಾಭವಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next